24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಸರಕಾರಿ ಬಸ್ಸಿನಲ್ಲೇ ಹೃದಯಾಘಾತವಾಗಿ ಲಾಯಿಲದ ಇಲೆಕ್ಟ್ರೀಷಿಯನ್ ತಾಜ್ ಬಾವುಂಞಿ ನಿಧನ

ಬೆಳ್ತಂಗಡಿ; ಲಾಯಿಲ ನಿವಾಸಿ, ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದ ತಾಜ್ ಬಾವುಂಞಿ(57) ರವರು ಮಂಗಳೂರಿನಿಂದ ವಾಪಾಸಾಗುತ್ತಿದ್ದ ವೇಳೆ ಸರಕಾರಿ ಬಸ್ಸಿನಲ್ಲೇ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಜೂ.26 ರಂದು ಸಂಜೆ ವೇಳೆ ನಡೆದಿದೆ.

ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಜನಾನುರಾಗಿಯಾಗಿ ಕಳೆದ ನಲ್ವತ್ತು ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಿದ್ದರು. ಅಗತ್ಯ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಅವರು ಸರಕಾರಿ ಬಸ್ಸಿನಲ್ಲಿ ವಾಪಾಸಾಗುತ್ತಿದ್ದರು. ಬಸ್ಸು ಪಡೀಲ್ ತಲುಪುತ್ತಿದ್ದಂತೆ ನಿರ್ವಾಹಕ ಟಿಕೇಟ್ ನೀಡುವುದಕ್ಕಾಗಿ ಕರೆದರೂ ಅವರು ಪ್ರತಿಕ್ರಿಯಿಸಿರಲಿಲ್ಲ.‌ ಸಂದೇಹದಿಂದ ಅಲ್ಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಸ್ಸು ಕೊಂಡೊಯ್ದು ವೈದ್ಯರು ಬಂದು ಪರಿಶೀಲಿಸಿ‌ದಾಗ ಅವರು ಮರಣವನ್ನಪ್ಪಿರುವುದು ಖಚಿತಗೊಂಡಿತು.

ಮೃತರು ಲಾಯಿಲ ಮಸೀದಿಯ ಕಾರ್ಯವ್ಯಾಪ್ತಿಗೆ ಬರುವ ನೂರುಲ್ ಹುದಾ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಟ್ರಸ್ಟ್ ವ್ಯಾಪ್ತಿಗೊಳಪಡುವ ಲಾಯಿಲ ಮಸ್ಜಿದ್‌ನ ವಾಣಿಜ್ಯ ಸಂಕೀರ್ಣದಲ್ಲಿ ಹಾರ್ಡ್‌ವೇರ್ ಮಳಿಗೆ ಹೊಂದಿರುವ ಅಶೋಕ ಶೆಟ್ಟಿ ಅವರ ಪತ್ನಿ ಅದೇ ಬಸ್ಸಿನಲ್ಲಿ ಮಂಗಳೂರಿನಿಂದ ಕೆಲಸ ಮುಗಿಸಿ ವಾಪಾಸಾಗುತ್ತಿದ್ದವರು ಈ ವಿಚಾರ ಅವರ ಪತಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಬಳಿಕ ಮಸೀದಿ ಕಮಿಟಿಯವರಿಗೆ ಅವರು ವಿಚಾರ ಮುಟ್ಟಿಸಿ ಮನೆಯವರು ಹಾಗೂ ಸಮಿತಿಯವರು ತಕ್ಷಣ ಮಂಗಳೂರಿಗೆ ಧಾವಿಸಿ ಅಗತ್ಯ ಕಾನೂನು ಪ್ರಕ್ರೀಯೆ ಮುಗಿಸಿ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಲಾಯಿಲದ ಮನೆಗೆ ತಂದಿದ್ದಾರೆ.

ಮೃತರು ಪತ್ನಿ,‌ ಪದವೀಧರರಾಗಿರುವ ಮೂವರು ಹೆಣ್ಣುಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಧರ್ಮಸ್ಥಳ : ನೇತ್ರಾವತಿ ಸ್ನಾನಘಟ್ಟ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಮುಂಡಾಜೆ: ಸೋಮಂತ್ತಡ್ಕದಲ್ಲಿ ಚರಂಡಿಗೆ ಬಿದ್ದ ಶಾಲಾ ಬಸ್

Suddi Udaya

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

Suddi Udaya

ಮುಡಾ ಹಗರಣ: ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ

Suddi Udaya

ಬೆಳಾಲು ಪ್ರೌಢಶಾಲಾ ಮಕ್ಕಳಿಂದ ಬಳಂಜ ಫಾರ್ಮ್ ಭೇಟಿ

Suddi Udaya

ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶ್ರೀಮತಿ ಚೈತನ್ಯ ಮತ್ತು ನಿರಂಜನ ಗೌಡ ರವರಿಂದ ವಿದ್ಯುತ್ ಚಾಲಿತ ಗಂಟೆ ಕೊಡುಗೆ

Suddi Udaya
error: Content is protected !!