24.7 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿವೃತ್ತ ನೌಕರರ ಸಂಘದ ರಜತ ಮಹೋತ್ಸವ ಸ್ಮರಣಸಂಚಿಕೆ “ಪ್ರಬುದ್ಧ” ಡಾ| ಡಿ. ಹೆಗ್ಗಡೆಯವರಿಗೆ ಅರ್ಪಣೆ


ಧರ್ಮಸ್ಥಳ : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕವು 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ರಜತ ಮಹೋತ್ಸವದ ಸಂದರ್ಭ ಪ್ರಕಟಿಸಿದ ಸ್ಮರಣಸಂಚಿಕೆ “ಪ್ರಬುದ್ಧ” ವನ್ನು ಡಾ. ಡಿ ವಿರೇಂದ್ರ ಹೆಗ್ಗಡೆಯವರಿಗೆ ಜೂ.18ರಂದು ಅರ್ಪಿಸಲಾಯಿತು.

ರಜತ ಮಹೋತ್ಸವ ಕಟ್ಟಡ ನಿರ್ಮಾಣಕ್ಕೆ ಹೆಗ್ಗಡೆಯವರು ವಿಶೇಷ ಆರ್ಥಿಕ ನೆರವು ನೀಡಿರುವುದಲ್ಲದೆ ಸಂಘದ ಚಟುವಟಿಕೆಗಳಿಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವ ಬಗ್ಗೆ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಹೆಗ್ಗಡೆಯವರು ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.


ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠಲ ಶೆಟ್ಟಿ ಮತ್ತು ಸದಸ್ಯರುಗಳಾದ ಬಿ. ಸೋಮಶೇಖರ ಶೆಟ್ಟಿ, ಜಗನ್ನಿವಾಸ ರಾವ್, ವಸಂತ ಸುವರ್ಣ ಮತ್ತು ಆರ್.ಎನ್. ಪೂವಣಿ ಉಪಸ್ಥಿತರಿದ್ದರು.

Related posts

ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ ಆರಂಭ

Suddi Udaya

ಡಿ.30 ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರಕ್ಕೆ ಯುಗಲಮುನಿವರ್ಯರಾದ ಪರಮಪೂಜ್ಯ108 ಶ್ರೀ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮುನಿ ಮಹಾರಾಜ ಪುರಪ್ರವೇಶ

Suddi Udaya

ವೇಣೂರು: ಪೆರಿಂಜೆ ನಿವಾಸಿ ಪಿ.ಎ.ಇಬ್ರಾಹಿಂ ನಿಧನ

Suddi Udaya

ಪಿಲ್ಯ ಗೋಳಿಕಟ್ಟೆಯಲ್ಲಿ ಕಾರು ಅಪಘಾತ

Suddi Udaya

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.1,979 ಕೋಟಿ ವ್ಯವಹಾರ, ರೂ.5.85 ಕೋಟಿ ಲಾಭ, ಶೇ.15 ಡಿವಿಡೆಂಡ್

Suddi Udaya
error: Content is protected !!