ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ವಲಯದ ಭಜನಾ ಮಂಡಳಿಯ ಸಭೆಯನ್ನು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾ ಭವನದಲ್ಲಿ ನಡೆಸಲಾಯಿತು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ ಭಜನಾ ಪರಿಷತ್ ನ ಕಾರ್ಯದರ್ಶಿಯವರಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯುರು ಭಜನಾ ಮಂಡಳಿಗಳ ದಾಖಲಾತಿಗಳನ್ನು ತಯಾರಿಸಿ, ಭಜನಾ ಮಂಡಳಿಗಳ ಸಮಿತಿಗಳನ್ನು ಬಲಪಡಿಸಿ, ಭಜನಾ ಮಂಡಳಿಗಳ ಮೂಲಭೂತ ಸೌಕರ್ಯ, ಕುಂದು ಕೊರತೆಯನ್ನು ಸರಿಪಡಿಸಿಕೊಳ್ಳಲು ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ನಮ್ಮ ಹಿಂದೂ ಸಂಪ್ರದಾಯದಲ್ಲಿ ಭಜನೆಗೆ ಇರುವ ಮಹತ್ವದ ಬಗ್ಗೆ ಸವಿವಾರವಾಗಿ ಮಾಹಿತಿಯನ್ನು ನೀಡಿದರು. ಪೂಜ್ಯಖಾವಂದರಿಗೆ ಭಜನಾ ಮಂಡಳಿಗಳ ಮೇಲೆ ಇರುವ ಅಭಿಮಾನದ ಬಗ್ಗೆ ತಿಳಿಸುತ್ತಾ ವಲಯದಲ್ಲಿ ಮುಂದಿನ ದಿನಗಳಲ್ಲಿ ಭಜನಾ ಮಂಡಳಿಗಳು ಒಗ್ಗಟ್ಟಿನಲ್ಲಿ ಇದ್ದು ಉತ್ತಮವಾಗಿ ಸಂಘಟನೆಯನ್ನು ಮಾಡಿ ನಗರಭಜನೆ ಮೂಲಕ, ವಿವಿಧ ಧಾರ್ಮಿಕ ಕಾರ್ಯಕ್ರಮ, ವಾರ್ಷಿಕೋತ್ಸವದ ಮಾಡುತ್ತಾ ಎಲ್ಲಾ ಭಜನಾ ಮಂಡಳಿಗಳು ಕ್ರಿಯಾಶೀಲಾ ಇರುವ ಹಾಗೆ ನಾವೆಲ್ಲರೂ ಪ್ರಯತ್ನ ಪಡೋಣ, ತಾಲ್ಲೂಕು ಪರಿಷತ್ ವತಿಯಿಂದ ಎಲ್ಲಾ ರೀತಿಯ ಸಹಕಾರ ಸಲಹೆ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು .
ಸಭೆಯ ಅಧ್ಯಕ್ಷತೆಯನ್ನು ವಲಯ ಭಜನಾ ಮಂಡಳಿ ಸಂಯೋಜಕರಾದ ಗಣೇಶ್ ಕಣ್ಣಾಜೆ ವಹಿಸಿದರು. ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಕೇಂದ್ರ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್ ರವರು ಮಾತನಾಡುತ್ತ ವಲಯದ ಎಲ್ಲಾ ಭಜನಾ ಮಂಡಳಿಗಳು ಸಕ್ರೀಯವಾಗಿ ಒಗ್ಗಟ್ಟಿನಲ್ಲಿ ಉತ್ತಮ ಕಾರ್ಯಕ್ರಮ ಸಂಯೋಜನೆ ಮಾಡುವಂತೆ, ಮೂಲಭೂತ ಸೌಕರ್ಯ ಮಾಡಿಕೊಳ್ಳಲು ಸಲಹೆ ಮಾರ್ಗದರ್ಶನ ನೀಡಿದರು.
ಬೆಳ್ತಂಗಡಿ ವಲಯ ಮೇಲ್ವಿಚಾರಕರಾದ ಹರೀಶ್ ಗೌಡ, ಎಲ್ಲಾ ಭಜನಾ ಪರಿಷತ್ ನ ಪದಾಧಿಕಾರಿಗಳು ಮತ್ತು ವಲಯ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರು ನಿರೂಪಿಸಿ, ಸೇವಾಪ್ರತಿನಿಧಿ ಜ್ಯೋತಿ ಸ್ವಾಗತಿಸಿ, ಸೇವಾಪ್ರತಿನಿಧಿ ಯೋಗೀಶ್ ವಂದಿಸಿದರು.