ಬೆಳ್ತಂಗಡಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡಬೇಕೆಂಬ ಕನಸು ಹೊತ್ತು ಮಂಗಳೂರಿನ ಉದಯ ಪೂಜಾರಿ ಬಳ್ಳಾಲ್ ಬಾಗ್ ಸ್ಥಾಪಕ ಅಧ್ಯಕ್ಷತೆಯ ಬಿರುವೆರ್ ಕುಡ್ಲ ಸಂಘಟನೆಯನ್ನು ಸುವರ್ಣ ಪ್ರತಿಷ್ಠಾನ ಅಧ್ಯಕ್ಷರು ಸಂಪತ್ ಬಿ. ಸುವರ್ಣ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕಕ್ಕೆ ಐದು ವರ್ಷಗಳನ್ನು ಪೂರೈಸಿದೆ.
ಫೆಬ್ರವರಿ 13, 2018ರಂದು ಪ್ರಾರಂಭಗೊಂಡ ಈ ಸಂಘ ಇಂದಿಗೆ 48 ಸೇವಾ ಯೋಜನೆ ಪೂರ್ಣ ಗೊಂಡಿದೆ.
ಬೆಳ್ತಂಗಡಿ ಘಟಕದ 49, ಹಾಗೂ 50ನೇ ಸೇವಾ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನ ಕುಕ್ಕವು ಗ್ರಾಮದ ದಿ. ಲಿಂಗಪ್ಪ ಕುಂಬಾರ ಇವರ ತಂಗಿ ಕುಮಾರಿ ಕಲ್ಯಾಣಿ ಇವರಿಗೆ ನೀಡಿದರು. ಇವರ ಕುಟುಂಬ ದಲ್ಲಿ ಆಧಾರ ಸ್ಥಂಬ
ವಾಗಿದ್ದ ಲಿಂಗಪ್ಪ ಕುಂಬಾರರು ಅಗಲಿದ್ದು, ಕಲ್ಯಾಣಿಯವರು ಒಬ್ಬಂಟಿಯಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ.
ಅಲ್ಲದೇ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಬಾಲ್ಯರಾಬೆಟ್ಟು ಇರ್ವತ್ತೂರು ನೈನಾಡು ಮನೆಯ ಗಂಗಾಧರ್ ಈ ಎರಡು ಕುಟುಂಬಕ್ಕೆ ಘಟಕದಿಂದ ಫಲಾನುಭವಿಗಳಿಗೆ ಚೆಕ್ಕ್ ನ್ನು ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಇವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ರಾಜೇಶ್ ಕೋಟ್ಯಾನ್, ಕಾರ್ಯದರ್ಶಿ ಅರುಣ್ ಪೂಜಾರಿ, ಹರೀಶ್ ಕೋಟ್ಯಾನ್ ಮದ್ದಡ್ಕ, ವಿನಯ್ ಗುರಿಪಲ್ಲ, ದಿನೇಶ್ ಕೋಟ್ಯಾನ್, ಸುರೇಶ್ ಪೂಜಾರಿ, ಅನಿಲ್, ಗುರುಪ್ರಸಾದ್ ಉಪಸ್ಥಿತರಿದ್ದರು.