September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

ಗುರುವಾಯನಕೆರೆ : ಕರ್ನಾಟಕ ಮುಸ್ಲಿಮ್ ಜಮಾಅತ್ ಗುರುವಾಯನಕೆರೆ ಸರ್ಕಲ್ ವತಿಯಿಂದ ಜಾರಿಗೆಬೈಲು ತಾಜುಲ್ ಉಲಮಾ ಸಭಾಂಗಣದಲ್ಲಿ “ಪ್ರಜಾ ಭಾರತ” ಎಂಬ ವಿಷಯದ ಕುರಿತು ಸೌಹಾರ್ಧ ಸಮಾಜದ ಸವಿ ನೆನಪುಗಳು ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ.ಎಮ್.ಜೆ. ಗುರುವಾಯನಕೆರೆ ಸರ್ಕಲ್ ನ ಅಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎಸ್.ಎಮ್. ಕೋಯಾ, ಜಾರಿಗೆಬೈಲು ಮುದರ್ರಿಸ್ ರಾದ ಮಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಖಾನಿ, ಕಳಿಯ ಸಿ.ಎ.ಬ್ಯಾಂಕಿನ ಅಧ್ಯಕ್ಷರಾದ ವಸಂತ ಮಜಲು, ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ರಾವ್ ನಾಳ, ರಾಘವ.ಎಚ್.ಗೇರುಕಟ್ಟೆ, ನಿವೃತ್ತ ಪತ್ರಾಂಕಿತ ಅಧಿಕಾರಿ ಶಂಭು ಶರ್ಮಾ, ಪತ್ರಕರ್ತರಾದ ಕೆ.ನಾಣ್ಯಪ್ಪ ಗೌಡ, ನಿವೃತ್ತ ಸೈನಿಕರಾದ ಮಹಮ್ಮದ್ ರಫೀ ಬೆಳ್ತಂಗಡಿ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಜಾರಿಗೆಬೈಲು ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಮುಸ್ಲಿಯಾರ್ ಸೌಹಾರ್ಧತೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು., ಎ.ಕೆ. ಅಹಮ್ಮದ್, ಅಬೂಬಕ್ಕರ್ ಹಾಜಿ ಪೆಳತ್ತಲಿಕೆ, ಹಾಜಿ ಅಬೂಬಕ್ಕರ್ ಕಜೆಮಾರು, ಅಬೂಸ್ಟಾಲಿಹ್ ಮುಳ್ಳಗುಡ್ಡೆ, ಹಂಝ ಗೋವಿಂದೂರು, ಹಾರಿಶ್ ಕುಕ್ಕುಡಿ, ಸಿದ್ದೀಕ್.ಜಿ. ಎಚ್., ಮಹಮ್ಮದ್ ಸೇರಾಜೆ ಉಪಸ್ಥಿತರಿದ್ದರು. ಹಾಜಿ ಹಸೈನಾರ್ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಹರೀಶ್ ಪೂಂಜ

Suddi Udaya

ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಪುಂಜಾಲಕಟ್ಟೆ-ಚಾರ್ಮಾಡಿ ಭರದಿಂದ ಸಾಗುತ್ತಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಬಂದಾರು ಮತ್ತು ಮೊಗ್ರು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ

Suddi Udaya

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀ ಯ ವಿಚಾರ ಸಂಕಿರಣ

Suddi Udaya

ಸಿಇಟಿ ಇಂಜಿನಿಯರಿಂಗ್ ಪರೀಕ್ಷಾ ಫಲಿತಾಂಶ : ಧರ್ಮಸ್ಥಳದ ಸೃಜನ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya
error: Content is protected !!