ಬೆಳ್ತಂಗಡಿ : ಲಾಯಿಲ ಗ್ರಾಮದ ಕಾಶಿಬೆಟ್ಟುವಿನ ಶ್ರೀಮತಿ ಮಲ್ಲಿಕಾರವರ ಮಗ ರಂಜಿತ್ ಕುಮಾರ್ ಆರ್ ಇವರು, ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು ಇಲ್ಲಿ, ಡಾ. ಸುಜಿತ್ ಸರ್ಕಾರ್ ಅವರ ಮಾರ್ಗದರ್ಶನದಲ್ಲಿ, ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನಿಂದ ಪಿಹೆಚ್ ಡಿ ಪದವಿಯನ್ನು ಪಡೆದಿರುತ್ತಾರೆ.
ಇವರು ಸಂತ ತೆರೇಸಾ ಪ್ರೌಢಶಾಲೆ, ವಾಣಿ ಪದವಿ ಪೂರ್ವ ಕಾಲೇಜು ಹಾಗೂ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿ.
ಸಂಶೋಧನಾ ಅವಧಿಯಲ್ಲಿ 15 ಸಂಶೋಧನಾ ಲೇಖನಗಳು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.
ಸಂಶೋಧನೆ ಆಧಾರಿತವಾಗಿ ರಾಷ್ಟ್ರೀಯ ಮಟ್ಟದ ಡಾ. ಕೆ.ವಿ ರಾವ್ ಸೈಂಟಿಫಿಕ್ ಸೊಸೈಟಿಯವರು ಪ್ರತಿ ವರ್ಷ ಕೊಡಲ್ಪಡುವ “ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ” 2023 ರಲ್ಲಿ ಪಡೆದಿರುತ್ತಾರೆ. ಕೇಂದ್ರ ಸರಕಾರದ, ಡಿಪಾರ್ಟ್ಮೆಂಟ್ ಆಫ್ ಸೈನ್ಸ್ & ಟೆಕ್ನಾಲಜಿಯಿಂದ, “ಕ್ಲಿಷ್ಟವಾದ ಸಂಶೋಧನಾ ವಿಷಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವುದು” ಎಂಬ ವಿಷಯದ ಬಗ್ಗೆ ಬರೆದ ಲೇಖನಕ್ಕೆ “ಬೆಸ್ಟ್ ಸೈನ್ಸ್ ಸ್ಟೋರಿ ಅವಾರ್ಡ್” ಪಡೆದುಕೊಂಡಿರುತ್ತಾರೆ.