26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ : ಧಾರ್ಮಿಕ ಸಭೆ ಮತ್ತು ಭಜನಾ ಕಾರ್ಯಕ್ರಮ

ಮುಂಡೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಂಡೂರು ಇದರ 9ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಮತ್ತು ಭಜನಾ ಕಾರ್ಯಕ್ರಮವನ್ನು  ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮದ ಕೊಡುಗೈ ದಾನಿ ಹಾಗೂ ಬೆಂಗಳೂರಿನ ಉದ್ಯಮಿ ದಿವಾಕರ ಮೂಲ್ಯ ರವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾದ ಮುಂಡೂರು ಸರಕಾರಿ ಕಿ. ಪ್ರಾಥಮಿಕ ಶಾಲೆಯ  ಮುಖ್ಯೋಪಾಧ್ಯಾಯರಾದ ಕಲ್ಲೇಶಪ್ಪರನ್ನು ಹಾಗೂ ಮುಂಡೂರು ಗ್ರಾಮದ ಪ್ರಥಮ ಪ್ರಜೆ ಶ್ರೀಮತಿ ಸವಿತಾರವರು ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ಕೆ ಎಸ್. ಅಧ್ಯಕ್ಷ ಅಶೋಕ್ ಕುಮಾರ್ ಕೊಡಕ್ಕಲ್, ಉಪಾಧ್ಯಕ್ಷ ರಮೇಶ್ ದೇವಾಡಿಗ, ಕಾರ್ಯದರ್ಶಿ ಪ್ರಸನ್ನ ನಾನಿಳ್ತ್ಯಾರ್, ಕೋಶಧಿಕಾರಿ ಹರಿಶ್ಚಂದ್ರ ಹೆಗ್ಡೆ, ಪ್ರದಾನ ಅರ್ಚಕರಾದ ಅರವಿಂದ ಭಟ್, ರಾಘವೇಂದ್ರಭಟ್, ಜೀರ್ಣೋದ್ದಾರ ಸಮಿತಿಯ  ಅಧ್ಯಕ್ಷ ಡಾ ಎಂ ಎಂ ದಯಾಕರ ಭಟ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ್ ಸಾಲಿಯಾನ್, ಶ್ರೀ ಶಾರದಾಂಭ ಯುವಕ ಮಂಡಲ ಅಧ್ಯಕ್ಷ  ರಮಾನಂದ  ಸಾಲಿಯಾನ್, ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ್ ಅಂಚನ್ ಕಾರ್ಯದರ್ಶಿ ಕೇಶವ್ ಕುಲಾಲ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಉಮಾವತಿ, ಆನಂದ ಸಾಲಿಯಾನ್, ಚಾಮರಾಜಸೇ ಮಿತ, ವಸಂತ ಪೂಜಾರಿ, ಜ ಯಾನಂದ ಬಂಗೇರ, ಸದಾನಂದ ನಾಯ್ಕ್, ಸುರೇಶ್ ಶೆಟ್ಟಿ ಇವರುಗಳು ಸೇರಿ ಗೌರವಾನ್ವಿತರನ್ನು ಸನ್ಮಾನಿಸಿದರು.

ಶ್ರೀ ಶಾರದಾ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಶ್ರೀ ಗುರು ಮಿತ್ರ ಸಮೂಹ (ರಿ )ಬೆಳ್ತಂಗಡಿ ಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ವೈದಿಕ ವಿಧಿ ವಿಧಾನಗಳು ನಡೆದು ಗಣೇಶನ ವಿಗ್ರಹವನ್ನು ದೇವಸ್ಥಾನದ ಕೆರೆಯಲ್ಲಿ ಜಲ ಸ್ತಂಭನ ಮಾಡಲಾಯಿತು.

Related posts

ಕರ್ನಾಟಕ ಮುಸ್ಲಿಮ್ ಜಮಾಅತ್ ಗುರುವಾಯನಕೆರೆ ಸರ್ಕಲ್ ವಾರ್ಷಿಕ ಮಹಾಸಭೆ

Suddi Udaya

ಮಚ್ಚಿನ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಮಿಯ ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ

Suddi Udaya

ಕೊಕ್ಕಡದಲ್ಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತುರ್ತು ಸ್ಪಂದನೆ: ನಡ ಸ.ಹಿ.ಪ್ರಾ. ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯ

Suddi Udaya

ಕು| ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಳೆಂಜ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ

Suddi Udaya
error: Content is protected !!