26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಆಂಬುಲೆನ್ಸ್ ನಲ್ಲಿ ಗೆಳೆಯರ ಜೊತೆ ಟ್ರಿಪ್: ಬೆಳ್ತಂಗಡಿ ಸಂಚಾರ ಪೊಲೀಸರಿಂದ ಬಿತ್ತು ಚಾಲಕನಿಗೆ ದಂಡ

ಬೆಳ್ತಂಗಡಿ : ಆಂಬುಲೆನ್ಸ್ ಇರುವುದು ಗಂಭೀರವಾಗಿರುವ ವ್ಯಕ್ತಿಗಳನ್ನು ವೇಗವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕೆಲಸಕ್ಕೆ ಆದ್ರೆ ಇಲ್ಲಿ ಒರ್ವ ಚಾಲಕ ತನ್ನ ಆರು ಮಂದಿ ಗೆಳೆಯರನ್ನು ಆಂಬುಲೆನ್ಸ್ ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ ,ಉಡುಪಿ ದೇವಸ್ಥಾನಕ್ಕೆ ಟ್ರಿಪ್ ಹೋರಟಿದರು. ಆದರೆ ಕೊಟ್ಟಿಗೆಹಾರ ಆಗಿ ಉಜಿರೆ ಬರುತ್ತಿದ್ದಂತೆ ಬೆಳ್ತಂಗಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ.

ಚಿಕ್ಕಮಗಳೂರಿನ ಕೊಟ್ಟಿಗಾರದಿಂದ ಚಾರ್ಮಾಡಿಯಾಗಿ ಉಜಿರೆ ಕಡೆ ಆಂಬುಲೆನ್ಸ್ ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಅವರಿಗೆ ಮಾಹಿತಿ ಬಂದಿದೆ, ತಕ್ಷಣ ತಮ್ಮ ಠಾಣೆಯ ಸಿಬ್ಬಂದಿ ಸುನಿಲ್ ನನ್ನು ಉಜಿರೆ ಬೀಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾಹಿತಿ ನೀಡಿ ವಾಹನ ನಿಲ್ಲಿಸಿ ಠಾಣೆಗೆ ತರಲು ಸೂಚಿಸಿದ್ದಾರೆ ಅದರಂತೆ ಆಂಬುಲೆನ್ಸ್ ಠಾಣೆಗೆ ತಂದು ವಿಚಾರಿಸಿದಾಗ ಆಂಬುಲೆನ್ಸ್ ನಲ್ಲಿ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಬಗ್ಗೆ ಹೇಳಿದ್ದಾರೆ. ಸಂಚಾರಿ ಪೊಲೀಸರು ಚಾಲಕನಿಗೆ ರೂ. 4,500/- ದಂಡ ಹಾಕಿದ್ದಾರೆ.

Related posts

ಬಂದಾರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳಿಂದ ಶ್ರಮದಾನ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಹೊರಾಂಗಣಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ರೂ.9 ಲಕ್ಷ ವೆಚ್ಚದಲ್ಲಿ ಹಾಸುಕಲ್ಲು ಸಮರ್ಪಣೆ

Suddi Udaya

ಮಡಂತ್ಯಾರು ಕೃತಿ ಪೂಜಾರಿಗೆ ರಾಜ್ಯ ಮಟ್ಟದ “ಗಾನ ಸಿರಿ” ಪ್ರಶಸ್ತಿ

Suddi Udaya

ಸೋಣಂದೂರು ಕಜೆ ನಿವಾಸಿ ಮುಂಡಪ್ಪ ಮೂಲ್ಯ ನಿಧನ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

Suddi Udaya
error: Content is protected !!