ಗೇರುಕಟ್ಟೆ : ಡಿ.2 ರಂದು ಗೇರುಕಟ್ಟೆ ಹಾಲು ಉತ್ದಾದಕರ ಸಹಕಾರ ಸಂಘ ಹಾಗೂಕೃಷಿ ಇಲಾಖೆ ಮತ್ತು ಜಲಾನಯನ ಇಲಾಖೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಹಾಲು ಉ.ಸ. ಸಂಘದ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಾನುವಾರುಗಳ ಆರೋಗ್ಯ ಮಾಹಿತಿ ಶಿಬಿರ ಕುಳಾಯಿ “ಶುಭೋಧಯ” ನಿವಾಸದಲ್ಲಿ ಜರುಗಿತು.
ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ. ವಹಿಸಿದರು. ಬೆಳ್ತಂಗಡಿ ಪಶು ವೈದ್ಯಅಧಿಕಾರಿ ಮಂಜು ನಾಯ್ಕ ಜಾನುವಾರು ಆರೋಗ್ಯ ಹಾಗೂ ಹೆಚ್ಚು ಹಾಲು ಉತ್ಪಾದನೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಉತ್ಪಾದನಾ ಪದ್ಧತಿಯ ವತಿಯಿಂದ ಬೆಳ್ತಂಗಡಿ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಕೃಷಿ ಘಟಕದಡಿ ಜಾನುವಾರು ಆರೋಗ್ಯ ವೃದ್ಧಿಗೆ 1ಸಾವಿರ ರೂ ಮೌಲ್ಯದ ಜೌಷದ ಕಿಟ್ ರೈತರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ನಿರ್ದೇಶಕ ಶೇಖರ ನಾಯ್ಕ,ಕಳಿಯ ಗ್ರಾಮದ ಪಂಚಾಯತು ಸದಸ್ಯ ಹರೀಶ್ ಬಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಿಯ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ,ಹಾಲಿ ಸದಸ್ಯೆ ಸುಭಾಷಿಣಿ ಜನಾರ್ದನ ಗೌಡ, ಜಲಾನಯನ ಸಿಬ್ಬಂದಿಗಳು, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಧಿಕಾರಿ,ಸಿಬ್ಬಂದಿಗಳು,ಸಂಘದ ಸದಸ್ಯರು ಭಾಗವಹಿಸಿದರು.