ತಣ್ಣೀರುಪಂತ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಗುರುವಾಯನಕೆರೆ ಯೋಜನಾ ಕಛೇರಿ ವ್ಯಾಪ್ತಿಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಣ್ಣೀರುಪಂತ ವಲಯದ ಕುಪ್ಪೆಟ್ಟಿಯ ಬಸ್ಟ್ಯಾಂಡ್ ಬಳಿಯ ಬಿಲ್ಡಿಂಗ್ ನಲ್ಲಿ ಮೂರು ತಿಂಗಳ ಟೈಲರಿಂಗ್ ತರಬೇತಿಯನ್ನು ಹಮ್ಮಿಕೊOಡಿದ್ದು ಕರಾಯ ಕುಪ್ಪೆಟಿ ಒಕ್ಕೂಟದ ಅಧ್ಯಕ್ಷರಾದ ರಾಮ್ಮಣ್ಣ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.
ಟೈಲರಿಂಗ್ ಶಿಕ್ಷಕಿ ಶ್ರೀಮತಿ ಉಮಾರವರು ತರಬೇತಿಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಹರಿಣಿರವರು ತರಬೇತಿಯಲ್ಲಿ ಎಲ್ಲಾ ಸದಸ್ಯರು ಆಸಕ್ತಿಯಿಂದ ಭಾಗವಹಿಸಿ, ಟೈಲರಿಂಗ್ ಕಲಿತು ನುರಿತ ಟೈಲರ್ ಆಗಬೇಕು ಇದ್ದಕ್ಕೆ ಬೇಕಾದ ಪೂರಕ ಸಹಕಾರ ಯೋಜನೆಯಿಂದ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಾಯ ಕುಪ್ಪೆಟಿ ಸೇವಾಪ್ರತಿನಿಧಿ ಶ್ರೀಮತಿ ಸಂಧ್ಯಾ ಸ್ವಾಗತಿಸಿ, ಕರಾಯ ಬಿ ಸೇವಾಪ್ರತಿನಿಧಿ ಸುಜಾತಾ ರವರು ಧನ್ಯವಾದವಿತ್ತರು.