September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಿರಿ ಸಂಸ್ಥೆಯ 2024ನೇ ವ‍‍‍‍‍‍‍‍‍‍‍‍‍‍‍‍‍‍ರ್ಷದ ಕ್ಯಾಲೆಂಡರ್ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

ಧರ್ಮಸ್ಥಳ: ಸಿರಿ ಸಂಸ್ಥೆಯ ವತಿಯಿಂದ 2024ನೇ ವರ್ಷದ ಕ್ಯಾಲೆಂಡರ್ ಡಿ.2 ರಂದು ಧರ್ಮಾಧಿಕಾರಿಗಳು ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷರು ಡಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಬೀಡು (ಶ್ರೀ ಹೆಗ್ಗಡೆಯವರ ನಿವಾಸ)ವಿನಲ್ಲಿ ಬಿಡುಗಡೆಗೊಳಿಸಿದರು. ಅತ್ಯಂತ ವಿಶಿಷ್ಟ ರೀತಿಯಲ್ಲಿ ಮೂಡಿ ಬಂದಿರುವ 2024ನೇ ವರ್ಷದ ಕ್ಯಾಲೆಂಡರನ್ನು ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದರು.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಪರಮಪೂಜ್ಯರಿಗೆ ಗೌರವಾರ್ಪಣೆ ಸಲ್ಲಿಸಿದರು.

ಸಿರಿ ಕ್ಯಾಲೆಂಡರ್ ಮುದ್ರಣ ಕಾರ್ಯದಲ್ಲಿ ಸಹಕರಿಸಿದ ಮಂಜುಶ್ರೀ ಪ್ರಿಂಟರ್ಸ್‌ನ ಶೇಖರ್ ಹಾಗೂ ಸಿರಿ ಸಿಬ್ಬಂದಿಗಳಾದ ಪುಷ್ಪರಾಜ್ ಹಾಗೂ ಪ್ರವೀಣ್ ರವರಿಗೆ ಮೆಚ್ಚುಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರಸನ್ನ, ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಸುಧಾಕರ್, ಸಿರಿ ಸಂಸ್ಥೆಯ ವಿವಿಧ ವಿಭಾಗದ ಮೇಲ್ವಿಚಾರಕರು ಹಾಗೂ ಸಿರಿ ಸಿಬ್ಬಂದಿಗಳು ಮತ್ತು ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಕ್ಷೇತ್ರದ ಮುಖ್ಯ ಲೆಕ್ಕಾಧಿಕಾರಿಗಳಾದ ಪುರಂದರ ಭಟ್, ಉದಯ ಜೈನ್, ಮಹಾವೀರ ಅಜ್ರಿ , ರಾಜೇಂದ್ರ ದಾಸ್ ಮುಂತಾದವರು ಉಪಸ್ಥಿತರಿದ್ದರು.

Related posts

ಲಾರಿ ಅಡ್ಡಗಟ್ಟಿ ದರೋಡೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ ಅಂದರ್

Suddi Udaya

ಕರ್ನೋಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ: ವಾರೀಸುದಾರರ ಪತ್ತೆಗೆ ಮನವಿ

Suddi Udaya

ಅಭಿವೃದ್ಧಿ ಕಾಮಗಾರಿಗೆ ತಡೆ ಆರೋಪ: ಇಳಂತಿಲದಲ್ಲಿ ಬೃಹತ್ ಪ್ರತಿಭಟನೆ

Suddi Udaya

ಕಲ್ಮಂಜ ಬೆರ್ಕೆಯಲ್ಲಿ ಕೃಷಿ ತೋಟಕ್ಕೆ ಆನೆ ದಾಳಿ: ಅಪಾರ ಪ್ರಮಾಣ ಕೃಷಿ ನಾಶ

Suddi Udaya

ಕುಂಭಶ್ರೀ ಕಾಲೇಜು ವಿದ್ಯಾರ್ಥಿಗಳ 2K25: ಎಕ್ಸ್‌ಪ್ಲೋರಿಯಾ

Suddi Udaya

ಜೆಸಿಐ ಬೆಳ್ತಂಗಡಿಯ ಮಹಾಸಂಗಮ ಕಾರ್ಯಕ್ರಮ

Suddi Udaya
error: Content is protected !!