31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬಳಂಜ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಬಳಂಜ: ಎಲ್ಲಾ ಯುವಕರಿಗೆ ಸಮಾಜ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ.ಅದಕ್ಕಾಗಿ ಸಮಾಜ ಸೇವೆಗೆಂದೆ ಹಲವಾರು ಸಂಘ ಸಂಸ್ಥೆಗಳು ಹಿರಿಯರ ಹೊಸ ಚಿಂತನೆಗಳೊಂದಿಗೆ ಪ್ರಾರಂಭವಾಗಿದ್ದು ಅದರೊಂದಿಗೆ ಕೈ ಜೋಡಿಸಿ ವಾರದ ಅಲ್ಪ ಸಮಯವನ್ನು ಸಮಾಜಸೇವೆಗೆ ಮೀಸಲಿರಿಸಿ ಆ ಮೂಲಕ ದೇಶ ಸೇವೆ ಮಾಡಬೇಕು.ಇದರಿಂದ ಸಮಾಜದ ಅಭಿವೃದ್ಧಿ ಸಹಕಾರಿಯಾಗಲಿದೆ ಎಂದು ಪ್ರಗತಿ ಪರ ಕೃಷಿಕ ಸತೀಶ್ ರೈ ಬಾದಡ್ಕ ಹೇಳಿದರು.

ಅವರು ಭಾನುವಾರ ಬಳಂಜ ಅಟ್ಲಾಜೆ ಸ.ಹಿ .ಪ್ರಾ ಶಾಲೆಯಲ್ಲಿ ಸರ್ವೋದಯ ಯುವಕ ಮಂಡಲ ಅಟ್ಲಾಜೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ‌ ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಬಳಂಜ ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ ಪಿ ಕೆ ಉದ್ಘಾಟಿಸಿ ಮಾತನಾಡಿ ಬಳಂಜ ಕಲೆ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಗ್ರಾ ಪಂ ಅಗಿದೆ.ಉಮಾಮಹೇಶ್ವರ ಯುವಕ ಮಂಡಲ ಅದೆಷ್ಟೋ ಪ್ರತಿಭಾನ್ವಿತ ತಂಡವನ್ನು ಹೊಂದಿತ್ತು.ಮತ್ತೆ ಇಂತಹ ಪ್ರತಿಭೆಗಳನ್ನು ಬೆಳೆಸುವಲ್ಲಿ ಸರ್ವೋದಯ ಪ್ರೆಂಡ್ಸ್ ಕ್ಲಬ್ ಮುಂದಾಗಬೇಕು ಎಂದರು.

ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿ ಪ್ರತಿ ಯುವಕರಲ್ಲಿ ಸಮಾಜಸೇವೆಯ ತುಡಿತ ಇರಬೇಕು ಸಂಘ ಸಂಸ್ಥೆಗಳಲ್ಲಿ ಸಮಾಜದ ಹಿತಕ್ಕಾಗಿ ಶ್ರಮಿಸಬೇಕು.ಆಗ ಸಮಾಜ ಗುರುತಿಸುತ್ತದೆ.ಬಳಂಜ ಶಾಲೆಯು 75 ಸಂಭ್ರಮವನ್ನು ಆಚರಿಸಲು ಮುಂದಾಗಿದ್ದು ಈ ಶಾಲೆಯಲ್ಲಿ ಆಂಗ್ಲಮಾದ್ಯಮ ಶಿಕ್ಷಣದ ಜೊತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶವಿದೆ.ಸರ್ವೋದಯದ ಯುವಕರು ಸಮಾಜಸೇವೆಯ ಜೊತೆ ಬಳಂಜ ಶಾಲೆಯ ಅಮೃತ ಮಹೋತ್ಸವಕ್ಕೆ ಸಂಪೂರ್ಣ ಸಹಕರಿಸಬೇಕು ಎಂದರು.

ಖ್ಯಾತ ಚಲನ ಚಿತ್ರ ನಿರ್ದೇಶಕ ವಿನು ಬಳಂಜ,ಬಳಂಜ ಗ್ರಾ ಪಂ ಮಾಜಿ ಅದ್ಯಕ್ಷೆ ರತ್ನ ಶುಭಹಾರೈಸಿದರು.

ನೂತನ ಅದ್ಯಕ್ಷ ಸುರೇಶ್ ಹೇವ,ಕಾರ್ಯದರ್ಶಿ ಪ್ರಣಮ್ ಶೆಟ್ಟಿ,ಉಪಾಧ್ಯಕ್ಷ ಜಗದೀಶ್, ಜೊತೆ ಕಾರ್ಯದರ್ಶಿ ಪ್ರಶಾಂತ್ ಕಜೆಕೋಡಿ,ಕ್ರೀಡಾ ಕಾರ್ಯದರ್ಶಿ ಲತೇಶ್ ಪೆರಾಜೆ.ನಿಕಟಪೂರ್ವ ಅದ್ಯಕ್ಷ ಯಶೋಧರ ಶೆಟ್ಟಿ ,ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ಜಗದೀಶ್ ಕೊಂಗುಲ,ಚಿತ್ರನ್ ಕೊಂಗುಲ, ಮುಖ್ಯೋಪಾಧ್ಯಾಯ ಪ್ರಮೋದ್ ಉಪಸ್ಥಿತರಿದ್ದರು.

ಬ್ರಹ್ಮಶ್ರಿ ಕುಣಿತಾ ಭಜನಾ ಮಂಡಳಿ ಇದರ ಸಂಚಾಲಕ ಹರೀಶ್ ವೈ ಸ್ವಾಗತಿಸಿ ನಿರೂಪಿಸಿದರು.ನಿತೀನ್ ಶೆಟ್ಟಿ ವಂದಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 10ನೇ ವರ್ಷದ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ: ಯಮತೋ ಶೋಟೋಕಾನ್ ಕರಾಟೆ ಹಾಗೂ ಡ್ರೀಮ್ ಜೋನ್ ನೃತ್ಯ ತರಬೇತಿ ಕೇಂದ್ರ ಉದ್ಘಾಟನೆ

Suddi Udaya

2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ ಬಿಐ ಸೂಚನೆ

Suddi Udaya

ಡಿ.19: ಗುರುವಾಯನಕೆರೆಯಲ್ಲಿ ಹೊಟೇಲ್ ರೇಸ್ ಇನ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭ

Suddi Udaya

ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

Suddi Udaya

ಕಳೆಂಜ ರಾಜೇಶ್ ಎಂ.ಕೆ ಯವರ ಹಲ್ಲೆ ಪ್ರಕರಣ: ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲು: ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್

Suddi Udaya
error: Content is protected !!