25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬಿಲ್ಲವ ಸಂಘದ ಧತ್ತಿನಿಧಿಗೆ ಹುಂಬೆಜೆ ರಾಮಣ್ಣ ಪೂಜಾರಿ ಸ್ಮರಣಾರ್ಥ ರೂ.10 ಸಾವಿರ ದೇಣಿಗೆ

ಬಳಂಜ: ಇತ್ತೀಚೆಗೆ ನಿಧನರಾದ ದೈವದ ಮದ್ಯಸ್ಥ ನಾಲ್ಕೂರು ಗ್ರಾಮದ ಹುಂಬೆಜೆ ಮನೆಯ ರಾಮಣ್ಣ ಪೂಜಾರಿಯವರ ಸ್ಮರಣಾರ್ಥ ಅವರ ಕುಟುಂಬಿಕರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿಗೆ ರೂ.10 ಸಾವಿರ ದೇಣಿಗೆಯನ್ಮು ನೀಡಿದರು.

ಬಳಂಜ ಬಿಲ್ಲವ ಸಂಘವು ಕಳೆದ ಎರಡು ದಶಕಗಳಿಂದ ಸಂಘದ ಧತ್ತಿನಿಧಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ನೀಡುತ್ತ ಬರುತ್ತಿದ್ದು ಈ ಯೋಜನೆಗೆ ಹಲವಾರು ಮಂದಿ ದೇಣಿಗೆ ನೀಡಿ ಸಹಕರಿಸಿದ್ದಾರೆ.

ಧತ್ತಿನಿಧಿಯನ್ನು ದಿ.ರಾಮಣ್ಣ ಪೂಜಾರಿಯವರ ಪುತ್ರ ದುಗ್ಗಯ ಪೂಜಾರಿಯವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸದಸ್ಯರು, ದಿ.ರಾಮಣ್ಣ ಪೂಜಾರಿಯವರ ಕುಟುಂಬಿಕರು ಉಪಸ್ಥಿತರಿದ್ದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

Related posts

ಕನ್ಯಾಡಿ: ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಯಕ್ಷಿತಾರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸನ್ಮಾನ

Suddi Udaya

ಬಳಂಜ: ಅಟ್ಲಾಜೆ ಅಂಗನವಾಡಿ ಶಿಕ್ಷಕಿ ಜಾನಕಿ ಹೃದಯಾಘಾತದಿಂದ ನಿಧನ

Suddi Udaya

ಕಡಿರುದ್ಯಾವರ ಹೇಡ್ಯ ನಿವಾಸಿ ಎಸ್.ಪಿ ಮ್ಯಾಥ್ಯೂ ನಿಧನ

Suddi Udaya

ಕರಂಬಾರು ಹಿ.ಪ್ರಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

Suddi Udaya

ಕಡಿರುದ್ಯಾವರ ನಿವಾಸಿ ಅನಿಲ್‌ ಪೂಜಾರಿಯವರ 3 ತಿಂಗಳ ಪುಟ್ಟ ಕಂದನ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!