September 6, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿ

7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆ

  • ಇತ್ತೀಚಿಗೆ ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆ ಯಲ್ಲಿ ಬಿಡುಗಡೆಯಾದ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ
  • ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ
    ನಿಮಾ೯ಣ – .ಸುಂದರ ಕೇನಾಜೆ ಚಿತ್ರಕತೆ, ನಿರ್ದೇಶನ
  • ತಾಲೂಕಿನ ಕೊಯ್ಯೂರು, ಬಜಿಲ, ಬಂದಾರು, ಬೈಪಾಡಿ, ದಿಡುಪೆ, ಪುದುವೆಟ್ಟು, ಶಿರ್ಲಾಲು ಗಳಲ್ಲಿ ಚಿತ್ರೀಕರಣ

ಬೆಳ್ತಂಗಡಿ: 2024ರ ಜನವರಿ 5 ರಿಂದ 9ರ ವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯುವ 7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಇತ್ತೀಚಿಗೆ ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆ ಯಲ್ಲಿ ಬಿಡುಗಡೆಯಾದ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆಯಾಗಿದೆ. ವಿಕಿಪೀಡಿಯ ಫೌಂಡೇಶನ್ ತಯಾರಿಸಿದ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನು ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಮಾಡಿದ್ದರು. ಡಾ.ಸುಂದರ ಕೇನಾಜೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.
ತಾಲೂಕಿನ ಕೊಯ್ಯೂರು ಬಜಿಲ, ಬಂದಾರು ಬೈಪಾಡಿ ದಿಡುಪೆ, ಪುದುವೆಟ್ಟು, ಶಿರ್ಲಾಲು ಗಳಲ್ಲಿ ಚಿತ್ರೀಕರಣ ನಡೆದಿದೆ.

ಭಾರತದ ಬೇರೆಬೇರೆ ಭಾಷೆಗಳಿಂದ ಆಯ್ಕೆಯಾದ 70 ಸಾಕ್ಷ್ಯಚಿತ್ರ ಹಾಗೂ ಜಗತ್ತಿನ ಬೇರೆಬೇರೆ ದೇಶಗಳಿಂದ ಆಯ್ಕೆಯಾದ 310 ಚಲನ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅದರಲ್ಲಿ ತುಳು ಭಾಷೆಯ ಜಾನಪದ ವಿಭಾಗದಲ್ಲಿ ಈ ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ತುಳು ಭಾಷೆಯ ಏಕೈಕ ಸಾಕ್ಷ್ಯಚಿತ್ರವಾಗಿ ಅಯ್ಕೆಯಾಗಿದೆ. ಮಧ್ಯಕಾಲೀನ ಕರ್ನಾಟಕದ ರಹಸ್ಯ ತಾಂತ್ರಿಕ ಪಂಥಗಳ ಪ್ರಭಾವದಿಂದ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಕಂಡುಬರುವ ಒಂದು ಮಹತ್ವದ ಕುಣಿತ “ಪುರ್ಸ ಕಟ್ಟುನ”. ಬೆಳ್ತಂಗಡಿ ತಾಲೂಕಿನ ಕುದುರೆಮುಖ ಘಟ್ಟದ ತಳಭಾಗದಲ್ಲಿ ಇಂದಿಗೂ ಪ್ರಚಲಿತವಿರುವ ಈ ಕುಣಿತವು ಸುಗ್ಗಿ ತಿಂಗಳ ಹುಣ್ಣಿಮೆಯ ಆಸುಪಾಸು ದಿನಗಳಲ್ಲಿ ನಡೆಯುತ್ತದೆ. ತುಳುಭಾಷೆಯನ್ನು ಮಾತನಾಡುವ ಹಲವು ಜನಾಂಗಗಳು ಒಟ್ಟು ಸೇರಿ ನಡೆಸುವ ಈ ಕುಣಿತವು ಮೂಲತಃ ಗೌಡ ಸಮುದಾಯದವರು ನಡೆಸುತ್ತಾ ಬಂದದ್ದಾಗಿದೆ. ಆಚರಣೆ, ಮನರಂಜನೆ, ನಂಬಿಕೆ, ವಿಡಂಬನೆ ಮತ್ತು ಸಮನ್ವಯದ ಭಾಗವಾಗಿ ನಡೆಯುವ ಈ ಕುಣಿತದ ಒಳತಿರುಳು ಇದರಲ್ಲಿದೆ. ಒಟ್ಟು 40 ನಿಮಿಷದ ಈ ಸಾಕ್ಷ್ಯಚಿತ್ರ ತುಳುನಾಡಿನಲ್ಲಿ ಪ್ರಚಲಿತವಿದ್ದ ತಾಂತ್ರಿಕ ಪಂಥ ಮತ್ತು ಜನಪದ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ. ತುಳುನಾಡಿನ ಘಟನಾವಳಿ ಹಾಗೂ ವಿದ್ವಾಂಸರ ವಿಶ್ಲೇಷಣೆಯೊಂದಿಗೆ ಮೈಸೂರಿನ ಕನ್ನಡಿ ಕ್ರಿಯೇಷನ್ ತಯಾರಿಸಿದ ಈ ಸಾಕ್ಷ್ಯಚಿತ್ರ ಯೂಟ್ಯೂಬ್ ಮತ್ತು ವಿಕಿಮೀಡಿಯ ಕಾಮನ್ಸ್ ಮೂಲಕ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

Suddi Udaya

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಉರುವಾಲುವಿನ ಸೀತಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಮುಂಡಾಜೆ: ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಜಾಲಿ ಓ ಎ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಪಿಎಂ ಶ್ರೀ ಸರ್ಕಾರಿ ಮಾದರಿ ಬೆಳ್ತಂಗಡಿ ಶಾಲೆಗೆ ಧರ್ಮಸ್ಥಳದ ‘ಜ್ಞಾನ ವಿಕಾಸ’ ತಂಡ ಭೇಟಿ: ಸ್ಮಾರ್ಟ್ ಕ್ಲಾಸ್ ವೀಕ್ಷಣೆ

Suddi Udaya

ಮೂಡಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಸಾಧನೆಯ ಶಿಖರ: ದ್ವಿತೀಯ ಪಿಯುಸಿಯಲ್ಲಿ 32 ರ‍್ಯಾಂಕ್‌:ವಿಜ್ಞಾನ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಟಾಪ್ 10 ರ‍್ಯಾಂಕ್‌

Suddi Udaya
error: Content is protected !!