26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನೋತ್ಸವ

ಶಿಬಾಜೆ: ಶ್ರೀ ರಾಜರಾಜೇಶ್ವರಿ ಭಜನಾಮಂಡಳಿ ಪೆರ್ಲ ಶಿಬಾಜೆಯಲ್ಲಿ ಭಜನೋತ್ಸವವು ಡಿ.31 ರಂದು ಜರುಗಿತು.

ಬೆಳಿಗ್ಗೆ ಭಜನೋತ್ಸವ ಉದ್ಘಾಟನೆಯನ್ನು ಶಿಬಾಜೆ ದೇವಸ್ಥಾನದ ಅರ್ಚಕರಾದ ಶ್ರೀಧರ ಉಪಾಧ್ಯಾಯ ತಂಬ್ಲಾಜೆ, ಹಾಗೂ ಶಿಬಾಜೆ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಅಧ್ಯಕ್ಷ ವಿನಯಚಂದ್ರ. ಟಿ ಅಧ್ಯಕ್ಷತೆ ವಹಿಸಿದರು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ನಾರಾಯಣಗುರು ಕಾಲೇಜು ಕುದ್ರೋಳಿಯ ಉಪನ್ಯಾಸಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಭಾಗ ಪ್ರಮುಖ್ ಕೇಶವ ಬಂಗೇರ ಗೇರುಕಟ್ಟೆ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಶಿಬಾಜೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್, ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಅರಿಕೆಗುಡ್ಡೆ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಟಿ. ಪಿಲಿಕಬೆ, ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಎಂ.ಪಿ ರಾಜಗೋಪಾಲ ರಾವ್, ಕಳೆಂಜ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ರಾವ್, ಅಮ್ಮಾಜೆ ದೇವಸ್ಥಾನದ ಅಧ್ಯಕ್ಷ ಶರತ್.ಎ.ಆರ್, ಶಿಶಿಲ ವೈಕುಂಠಪುರ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ.ಕೆ, ಭಜನಾ ಮಂಡಳಿಯ ಗೌರವ ಸಲಹೆಗಾರ ತ್ಯಾಂಪಣ್ಣ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಜನೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ವಿ. ಹರೀಶ್ ನೆರಿಯ ಹಾಗೂ ಗೌರವ ಸಲಹೆಗಾರರಾದ ತ್ಯಾಂಪಣ್ಣ ಶೆಟ್ಟಿಗಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಊರ ಪರವೂರ ಭಜಕರು, ಗ್ರಾಮಸ್ಥರು ಭಾಗವಹಿಸಿದರು. ತ್ಯಾಂಪಣ್ಣ ಶೆಟ್ಟಿಗಾರ್ ಸ್ವಾಗತಿಸಿ, ಅಶೋಕ್ ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ವಿ.ಹರೀಶ್ ನೆರಿಯ ಇವರ ನಿರ್ವಹಣೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೋತ್ಸವ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗಮ ಕಲಾವಿದರು ಉಜಿರೆ ಇವರಿಂದ ‘ನನ ಮರ್ಲ್ ಕಟ್ಟೊಡ್ಚಿ’ ತುಳು ಹಾಸ್ಯಮಯ ನಾಟಕ ಜರುಗಿತು.

Related posts

ರಾಜ್ಯಮಟ್ಟದ ಹ್ಯಾಕಥಾನ್ ಸ್ಪರ್ಧೆ: ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ತುಳುವಿಗೆ ಅಧಿಕೃತ ಮಾನ್ಯತೆ: ತುಳುನಾಡಿನ ದಶಕಗಳ ಕನಸು ನನಸು: ಅಭಿನಂದನ್ ಹರೀಶ್ ಕುಮಾರ್

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ: ಧರ್ಮಸ್ಥಳ ಪೊಲೀಸರಿಂದ ದಾಳಿ ಆರೋಪಿಯ ಬಂಧನ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಹೆಚ್.ಪಿ.ವಿ ವ್ಯಾಕ್ಷಿನೇಷನ್ ಲಸಿಕಾ ಶಿಬಿರ

Suddi Udaya

ಮುಂಡಾಜೆಯ ಇಷ್ಠ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ

Suddi Udaya
error: Content is protected !!