ಬೆಳ್ತಂಗಡಿ : ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮ ಎಂಬಲ್ಲಿ ಶುಶ್ರೂಷೆಯ ಬಗ್ಗೆ ದಾಖಲಾಗಿದ್ದ ಮಂಗಳೂರು ತಾಲೂಕು ಹೊಸಬೆಟ್ಟು, ಸುರತ್ಕಲ್, ನಂದಶ್ರೀ ಅಪಾರ್ಟ್ ಮೆಂಟ್, ಮುಖ್ಯ ಪ್ರಾಣ ಮಠದ ಬಳಿಯ ನಿವಾಸಿ ಸುಧಾಕರ(58) ಎಂಬವರು ನಾಪತ್ತೆಯಾಗಿರುವುದಾಗಿ ಜ.13 ರಂದು ವೇಣೂರು ಠಾಣೆಗೆ ದೂರು ನೀಡಲಾಗಿದೆ.
ಸುಧಾಕರ ಅವರು ಸುಮಾರು 20 ವರ್ಷಗಳಿಂದ, ಮನೆಬಿಟ್ಟು ಸಿಕ್ಕಿದಲ್ಲಿ ಸುತ್ತಾಡಿಕೊಂಡಿದ್ದವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಅಪರೂಪಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದವರು, ಇತ್ತೀಚೆಗೆ ಮಾನಸಿಕ ಖಿನ್ನತೆಗೊಳಪಟ್ಟು ಪಣಂಬೂರು, ಬೈಕಂಪಾಡಿ ವಠಾರದಲ್ಲಿ ತುಂಬಾ ಕೀಟಲೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವನನ್ನು ಪಡುಬಿದ್ರೆ ಆಶ್ರಮದವರು ತಮ್ಮ ಆಶ್ರಮದಲ್ಲಿ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಬಿತ್ತರಿಸಿದ್ದನ್ನು ಕಂಡು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮ ಎಂಬಲ್ಲಿ ಶುಶ್ರೂಷೆಯ ಬಗ್ಗೆ ದಾಖಲಿಸಿದ್ದು, ಸದ್ರಿ ಸುಧಾಕರ ಜ.9 ರಂದು ರಾತ್ರಿ ಸುಮಾರು 12 ಗಂಟೆಯ ಬಳಿಕ ಆಶ್ರಮದಿಂದ ಕಾಣೆಯಾಗಿದ್ದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರು ನೀಡಿದ ಮಾಹಿತಿಯಂತೆ ಅವರು ಸಹೋದರ ವಿಜಯ ಎಂ.ಆಶ್ರಮಕ್ಕೆ ಬಂದು ವಿಚಾರಿಸಿ ಬಳಿಕ ಸಂಬಂಧಿಕರ ಮನೆಗಳಿಗೆಲ್ಲಾ ಸಂಪರ್ಕಿಸಿ, ಭೇಟಿ ನೀಡಿ ವಿಚಾರಿಸಿದ್ದಲ್ಲದೇ, ಪಣಂಬೂರು, ಬೈಕಂಪಾಡಿ, ಸುರತ್ಕಲ್ ವಠಾರಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದಾಗ ತಡವಾಗಿ ಬಂದು ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.