ಜ.25: ಉಜಿರೆ ವಿಜಯನಗರ ಅಜಿತ್‌ನಗರ (ಕಲ್ಲೆ) ದಲ್ಲಿ ಶ್ರೀ ವನದುರ್ಗಾ, ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ವಾರ್ಷಿಕ ಆರಾಧನೆ

Suddi Udaya

ಉಜಿರೆ: ವಿಜಯನಗರ ಅಜಿತ್‌ನಗರ (ಕಲ್ಲೆ) ಎಂಬಲ್ಲಿ ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆಯು ಜ.26ರಂದು ನಡೆಯಲಿರುವುದು.

ಕಾರ್ಯಕ್ರಮಗಳು:
ಜ.25ರಂದು ಸಂಜೆ ಪ್ರಾರ್ಥನೆ, ದುರ್ಗಾ ಪೂಜೆ ಆರಂಭ, ಮಹಾಪೂಜೆ, ಆರಾಧನೆ, ತೀರ್ಥ ಪ್ರಸಾದ ನಡೆಯಲಿರುವುದು.

ಜ.26ರಂದು ಬೆಳಿಗ್ಗೆ ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ (೧೨ ಕಾಯಿ) ಪೂರ್ಣಾಹುತಿ, ಅಭಿಷೇಕಾದಿಗಳು, ಪರ್ವಾರಾಧನೆಗಳು, ದುರ್ಗಾಹೋಮ ಆರಂಭ, ದುರ್ಗಾಹೋಮ, ಪೂರ್ಣಾಹುತಿ, ಆಶ್ಲೇಷ ಬಲಿ ಆರಂಭ, ಮಧ್ಯಾಹ್ನ ಮಹಾಪೂಜೆ, ವಟು, ಬ್ರಾಹ್ಮಣ ಆರಾಧನೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ, ಸಂಜೆ ಸಂಕಲ್ಪ, ರಂಗಪೂಜೆ ಆರಂಭ, ಮಹಾ ಮಂಗಳಾರತಿ, ಪ್ರಸಾದ ವತರಣೆ ನಡೆಯಲಿರುವುದು ಎಂದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ಮಾಲಕ ಮೋಹನ್ ಕುಮಾರ್ ತಿಳಿಸಿರುತ್ತಾರೆ.

Leave a Comment

error: Content is protected !!