ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಜ.31 ರಿಂದ ಫೆ.1 ರವರೆಗೆ ನಡೆಯಲಿದೆ.
ಜ.31 ಬೆಳಿಗ್ಗೆ 7.00ರಿಂದ ಗಣಹೋಮ, ಶ್ರೀ ದೇವರಿಗೆ ಪಂಚವಿಂಶತಿ ಕಲಶ, ದೇವರಿಗೆ ನವಕ ಕಲಶ, ನಾಗದೇವರಿಗೆ ಕಲಶ ಪ್ರಸನ್ನ ಪೂಜೆ, ದೇವರಿಗೆ ಕಲಶಾಭಿಷೇಕ, ಪ್ರತಿಷ್ಠಾ ವರ್ಧಂತ್ಯುತ್ಸವ, ಬೆಳಿಗ್ಗೆ 8.30ಕ್ಕೆ ಕೈಕಂಬ ಪೇಟೆ ಬಳಿಯಿಂದ ಇಂದಬೆಟ್ಟು, ನಾವೂರು, ನಡ, ಕನ್ಯಾಡಿ ಗ್ರಾಮಸ್ಥರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ., ಮಧ್ಯಾಹ್ನ 12.00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಫೆ.1 ರಂದು ಬೆಳಿಗ್ಗೆ ಗಣಹೋಮ, ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6.00 ರಿಂದ ಕಮ್ಮಟ ಭಜನೋತ್ಸವ, ರಾತ್ರಿ 7.30 ಕ್ಕೆ ರಂಗಪೂಜೆ, ಧಾರ್ಮಿಕ ಸಭೆ, ರಾತ್ರಿ 9.30 ರಿಂದ ವಿಜಯ್ ಕುಮಾರ್ ಕೊಡಿಯಲ್ ಬೈಲು ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ವಿಭಿನ್ನ ಶೈಲಿಯ ಶಿವದೂತೆ ಗುಳಿಗೆ ತುಳು ನಾಟಕ ನಡೆಯಲಿದೆ.
ಫೆ.20 ರಂದು ಸಂಜೆ 5.30 ರಿಂದ ಭೀಷ್ಮೈಕಾದಶಿ , ವಿಷ್ಣು ಸಹಸ್ರನಾಮ ಜಯಂತಿ ಆಚರಣೆ ಹಾಗೂ ಮಾತೃಸಂಗಮ ಕಾರ್ಯಕ್ರಮದಂಗವಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.