September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಉದ್ಘಾಟನೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಆರಂಭವಾಯಿತು. ಕಲಾ ಸಂಘದ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಿದ್ದಪ್ಪ ಗೌಡ, ಕಾರ್ಯದರ್ಶಿ ಶಶಿಧರ ಕೆ. ಗೊಲ್ಲ, ಖಜಾಂಚಿ ದಿವಾಕರ ಬೈಪಾಡಿ ಮತ್ತು ಭಾಸ್ಕರ ಶರ್ಮ ಕೊಲ್ಪಾಡಿ, ನಾಟ್ಯಗುರು ದಿನೇಶ್ ಮಾರ್ಪಾಲು, ಜನಾರ್ದನ ಪೂಜಾರಿ ಶಾಂತಿಗುಡ್ಡೆ ರವಿ ಶಾಂತಿಗುಡ್ಡೆ, ಸುಮಿತ್ ಆಚಾರ್ ಅನಂತೋಡಿ, ಪ್ರಭಾಕರ ಮಾಪಲ ಮೊದಲಾದವರು ಉಪಸ್ಥಿತರಿದ್ದರು.

ಈದಿನ ನಾಟ್ಯ ತರಗತಿಯನ್ನೂ ಆರಂಭಿಸಲಾಯಿತು. ಪ್ರತೀ ಆದಿತ್ಯವಾರದಂದು ಉಚಿತ ಯಕ್ಷಗಾನ ನಾಟ್ಯ ತರಗತಿ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದರು. ದಿನೇಶ್ ಮಾರ್ಪಾಲುರವರು ನಾಟ್ಯ ಗುರುಗಳಾಗಿ ನಾಟ್ಯ ತರಬೇತಿಯನ್ನು ನೀಡಲಿದ್ದಾರೆ.

Related posts

ಬೆಳ್ತಂಗಡಿ: ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ

Suddi Udaya

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ವಾಲ್ಮೀಕಿ ಹಗರಣ ಆರೋಪ: ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಚಾಮರಾಜನಗರ ಎನ್‌ಕೌಂಟರ್ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ: ಬಿಜೆಪಿ ಮಂಡಲದಿಂದ ರಾಜ್ಯಪಾಲರಿಗೆ ಮನವಿ

Suddi Udaya

ಬಾಂಜಾರು ಮಲೆ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಸಾರ್ವಜನಿಕ ಸಮಾಲೋಚನಾ ಸಭೆ

Suddi Udaya

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಕಾರ್ಯಾಗಾರ

Suddi Udaya

ಕಲ್ಲೇರಿ ಐಸಿರಿ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ ಮತ್ತು ಶ್ರಮದಾನ

Suddi Udaya
error: Content is protected !!