September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಮೊಗ್ರು ಗ್ರಾಮದ ಕೋರಿಯಾರು ಎಂಬಲ್ಲಿ ಯಾರು ಇಲ್ಲದ ವೇಳೆ ಮಾನಸಿಕ ಖಿನ್ನತೆಯಿಂದ ಬಳಲಿ ಹರೀಶ್ ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 16 ರಂದು ನಡೆದಿದೆ.ಬಂದಾರು ನಿವಾಸಿ ಹರೀಶ್ ರವರ ಪತ್ನಿ ಲೋಲಾಕ್ಷಿ.ಕೆ.ಎಂ ರವರ ದೂರಿನಂತೆ ಹರೀಶ್ ರವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವರು, ಕೊರೋನ ಅವಧಿ ಬಳಿಕ ಊರಿಗೆ ಬಂದು ಪದ್ಮುಂಜದ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದು, ಲೋಲಾಕ್ಷಿ ಅವರ ತವರು ಮನೆಯಲ್ಲಿದ್ದು, ಹರೀಶ್‌ ರವರು ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಕೋರಿಯಾರು ಎಂಬಲ್ಲಿದ್ದು, ಆಗಾಗ ಪತ್ನಿ ಮನೆಗೆ ಬಂದು ಹೋಗುತ್ತಿದ್ದವರು ಫೆ.15 ರಂದು ಕೆಲಸಕ್ಕೆ ಹೋಗದೆ ಮಧ್ಯಾಹ್ನ ವೇಳೆಗೆ ಪತ್ನಿ ಮನೆಗೆ ಬಂದು ಹೋಗಿದ್ದು ಬಳಿಕ ಅವರ ತಾಯಿ ಮನೆಯಲ್ಲೆ ಇದ್ದವರು ಫೆ. 16 ರಂದು ಬೆಳಗ್ಗೆ ಹರೀಶರವರ ತಾಯಿ ಭವಾನಿ ಮತ್ತು ಅತ್ತಿಗೆ ಉಮಾ ರವರು ತೋಟಕ್ಕೆ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ಹರೀಶ್ ಮಲಗುವ ಕೋಣೆಯಲ್ಲಿ ಮಾಡಿನ ಕಬ್ಬಿಣದ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸಮಯದ ಹಿಂದೆ ಹರೀಶ್‌ ರವರು ಖರೀದಿ ಮಾಡಿದ ಜಮೀನಿನ ದಾಖಲೆ ಪತ್ರ ಸರಿ ಇಲ್ಲವೆಂದು ಮತ್ತು ಹರೀಶ್‌ರವರ ಮನೆಯಲ್ಲಿ ಬ್ಯಾಂಕ್ ಲೋನ್ ಮಾಡಿದ ವಿಚಾರದಲ್ಲಿ ತೀವ್ರ ಚಿಂತಿತರಾಗಿ ಖಿನ್ನತೆಯಿಂದ ಇದ್ದವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಯುಡಿಆರ್ ನಂಬ್ರ 04/2024 ಕಲಂ:174 ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಬಂದಾರು ಸಿದ್ದಿವಿನಾಯಕ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಸುಲ್ಕೇರಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಮಾ.15-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

Suddi Udaya

ಸಿಎ ಪರೀಕ್ಷೆಯಲ್ಲಿ ಉಜಿರೆಯ ಹರಿದಾಸ್ ರಾವ್ ಕೆ.ಜಿ. ಉತ್ತೀರ್ಣ     

Suddi Udaya

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

Suddi Udaya

ಪ್ಯಾಲೆಸ್ತೀನ್ ದೇಶದ ಜನತೆಗೆ ಬೆಂಬಲ ಸೂಚಿಸಿ ಎಸ್‌ಡಿಪಿಐ ವತಿಯಿಂದ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Suddi Udaya
error: Content is protected !!