September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಾದವರಿಗೆ ಅಭಿನಂದನೆ

ಗೇರುಕಟ್ಟೆ: ಇಲ್ಲಿಯ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಆಂದ್ರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಎಸ್.ಎಸ್.ಎಫ್ ಸಾಹಿತ್ಯೋತ್ಸವದಲ್ಲಿ ಜನರಲ್ ವಿಭಾಗದ ಖವಾಲಿ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ, ನಶೀದ: ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಜಮಾಆತ್ ನ ಎಸ್.ಎಸ್.ಎಫ್ ಕಾರ್ಯಕರ್ತರಾದ ಅನ್ವರ್ ಸಾದಾತ್ ಮತ್ತು ಮಹಮ್ಮದ್ ಜುನೈದ್ ರವರಿಗೆ, ಕ್ಯಾಂಪಸ್ ವಿಭಾಗದ ಹಮ್ ದು ಉರ್ದು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಅಬ್ದುಲ್ ಖಾದರ್ ಸೈಪುಲ್ಲಾರವರಿಗೆ, ಭಟ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವದ ಕ್ಯಾಂಪಸ್ ವಿಭಾಗದ ಉರ್ದು ನಾತ್ ಗ್ರೂಪ್ ಸಾಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉನೈಸ್ ಜಿ.ಎ.ಮತ್ತು ಸುಹೈಲ್ ರವರಿಗೆ, ಸ್ಮಾರ್ಟ್ ಸ್ಕಾಲರ್ ಶಿಪ್ ಎಕ್ಸಾಮ್ ನಲ್ಲಿ ಜಿ.ಸಿ.ಸಿ.ಯಲ್ಲಿ ರ್‍ಯಾಂಕ್ ಪಡೆದ ಹಿದಾಯತು ಸ್ಸಿಬಿಯಾನ್ ಮದರಸದ ವಿದ್ಯಾರ್ಥಿನಿಯಾದ ಆಯಿಶಾ ಸಮ್ಹಾ ಫಹೀಮಾಳಿಗೆ, ದಾರುಲ್ ಇರ್ಶಾದ್ ಮಾಣಿ ಶಿಕ್ಷಣ ಸಂಸ್ಥೆಯ ಪ್ರಥಮ ಪಿ.ಯು.ಸಿ. ದಅವಾ ಧಾರ್ಮಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮುಹಮ್ಮದ್ ಲುಕ್ಮಾನ್ ,ಧಾರ್ಮಿಕ ದಅವಾ ಡಿಗ್ರಿಯಲ್ಲಿ ಪ್ರಥಮ ಸ್ಥಾನ ಪಡೆದ ಶಾಹುಲ್ ಹಮೀದ್ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಖತೀಬರಾದ ತಾಜುದ್ದೀನ್ ಸಖಾಫಿ, ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಅಬ್ಬಾಸ್ ಹಿಶಮಿ, ಅಬ್ದುಲ್ ಖಾದರ್ ಹಾಜಿ, ಅಬ್ದುಲ್ ಕರೀಮ್, ಜಿ. ಅಬ್ದುಲ್ ಖಾದರ್, ಅಬ್ದುಲ್ ಬಶೀರ್, ಬಶೀರ್ ಎಸ್.ಎ,ಯೂಸುಫ್.ಎಂ.ಕೆ., ಆದಂ ಹಾಜಿ,ಅಬ್ಬಾಸ್ ಬಟ್ಟೆಮಾರ್, ಮಹಮ್ಮದ್ ಎನ್.ಎನ್.,ರವೂಫ್ ಹಾಜಿ, ಹಾಮದ್ ಕುಂಞ ಕೊರಂಜ, ಆಸಿಫ್ ಎಸ್.ಯು,ಸಿದ್ದೀಕ್ . ಜಿ.ಎಚ್.,ಸೈಫುಲ್ಲಾ ಎಚ್.ಎಸ್,ಅಬ್ದುಲ್ ಅಝೀಝ್ ಮದನಿ,ಹಕೀಂ ಮುಳ್ಳಗುಡ್ಡೆ ಹಾಜರಿದ್ದರು.

Related posts

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದ ರಕ್ಷಿತ್ ಶಿವರಾಂ ರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೌರವರ್ಪಣೆ

Suddi Udaya

ಮಹಮ್ಮದೀಯ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿನಿ ಅಮೀನಾ ಫಾತಿಮಾರವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಬಂದಾರು: ಕುಂಟಾಲಪಲ್ಕೆ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಪುನರ್ ರಚನೆ

Suddi Udaya

ಮಚ್ಚಿನ ಕೊಡಿಯೇಲು ಎಂಬಲ್ಲಿ ಹೆಜ್ಜೇನು ದಾಳಿ: ಆರು ಮಂದಿಗೆ‌ ಗಾಯ- ಗಂಭೀರ ಗಾಯಗೊಂಡ‌ ಯುವಕ ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

Suddi Udaya

ನೆರಿಯದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಗ್ರಾಹಕರ ಸಮಾವೇಶ

Suddi Udaya
error: Content is protected !!