September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

ಉಜಿರೆ: ಯುವ ಪ್ರತಿಭಾನ್ವಿತರ ಕಲಾತ್ಮಕ ಅಭಿವ್ಯಕ್ತಿಗೆ ವೇದಿಕೆ ಒದಗಿಸಿಕೊಡುವ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪ್ರಸಕ್ತ ವರ್ಷದ ಝೇಂಕಾರದ ಐದನೇ ಆವೃತ್ತಿಯ ಸಾಂಸ್ಕೃತಿಕ ಉತ್ಸವ ಮಾ.14-15 ರಂದು ನಡೆಯಲಿದೆ. ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ.

ಪ್ರತಿವರ್ಷವೂ ಆಯೋಜಿತವಾಗುವ ಝೇಂಕಾರ ಸ್ಟಾರ್ ನೈಟ್‌ಗೆ ಖ್ಯಾತ ಜನಪ್ರಿಯ ನಟರು ಆಗಮಿಸುತ್ತಾರೆ. ಬೆಳೆಗಿನ ಅವಧಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ವಿವಿಧ ಸ್ಪರ್ಧೆಗಳು ಎರಡು ದಿನಗಳ ಕಾಲ ಆಯೋಜಿತವಾಗಲಿವೆ. ಆರಂಭದ ದಿನ ಸಂಜೆ ನಡೆಯುವ ಸ್ಟಾರ್‌ನೈಟ್ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ.

ಮಾಕ್ ಪ್ರೆಸ್, ಪ್ರೊ ಪ್ರೆಸೆಂಟರ್, ಕಲರ್ ಫುಲ್ ಕ್ಯಾನವಾಸ್ ಶೀರ್ಷಿಕೆಯ ವೈಯುಕ್ತಿಕ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಗ್ರುಪ್ ಇವೆಂಟ್ ವಿಭಾಗದಲ್ಲಿ ಸಮೂಹ ನೃತ್ಯ, ಫ್ಯಾಷನ್ ಪರೇಡ್, ರಸಪ್ರಶ್ನೆ, ಔಟ್ ಡೋರ್ ಇವೆಂಟ್ ವಿಭಾಗದಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯಾವಳಿ, ಸ್ಪಾಟ್ ಇವೆಂಟ್ ವಿಭಾಗದಲ್ಲಿ ರೀಲ್ ಮೇಕಿಂಗ್, ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಗಳು ಏರ್ಪಡಲಿವೆ.

ರಾಜ್ಯದ ವಿವಿಧೆಡೆಗಳಿಂದ 40ಕ್ಕೂ ಹೆಚ್ಚು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಅಂಗಳ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣದ ವೇದಿಕೆಯಾಗಿ ಕಂಗೊಳಿಸಲಿದೆ. ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ಒಂದು ಲಕ್ಷ ರೂ. ಮೌಲ್ಯದ ವಿವಿಧ ಬಹುಮಾನಗಳನ್ನು ಪಡೆಯಲಿದ್ದಾರೆ.

Related posts

ಅಪ್ರಾಪ್ತ ಬಾಲಕನ ಅಪಹರಿಸಿ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜಾಮೀನು ಮಂಜೂರು

Suddi Udaya

ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರೊ. ದಿ| ಎಸ್. ಪ್ರಭಾಕರ್ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ

Suddi Udaya

ಅಂತ ರಾಜ್ಯಗಣಿತ ಜ್ಞಾನತರಬೇತಿ ಕಾರ್ಯಕ್ರಮ

Suddi Udaya

ಮರೋಡಿ: 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

Suddi Udaya

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ

Suddi Udaya
error: Content is protected !!