July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಳೆಂಜ ಗ್ರಾ.ಪಂ. ಹಾಗೂ ಜನನಿ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ

ಕಳೆಂಜ: ಜನನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಇದರ ಸಮ್ಮಿಲನದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಎ.ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಜನನಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ರೈ, ಸಂಪನ್ಮೂಲ ವ್ಯಕ್ತಿ ಉಷಾ ಕಾಮತ್, ಕಿರಿಯ ಆರೋಗ್ಯ ಸಹಾಯಕಿ ನಿಖಿತಾ ಮತ್ತು ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ವೀಣಾ, ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಹಾಗೂ ಕಾರ್ಯದರ್ಶಿ ಹೊನ್ನಪ್ಪ ಗೌಡ ಉಪಸ್ಥಿತರಿದ್ದರು.

ಜಯಶ್ರೀ ನಿರೂಪಿಸಿ ಹಾಗೂ ಸ್ವಾಗತವನ್ನು ಜನನಿ ಸಂಜೀವಿನಿ ಒಕ್ಕೂಟದ MBK ವಿಮಲರವರು ಮಾಡಿದರು.ಪ್ರಾರ್ಥನೆಯನ್ನು ಜಯಶ್ರೀ ಜನನಿ ಸಂಜೀವಿನಿ ಕಾರ್ಯದರ್ಶಿ ಮಾಡಿದರು.ಸದಸ್ಯರಿಗೆ ಆಟೋಟ ಸ್ಪರ್ದೆಯನ್ನು ನಡೆಸಲಾಯಿತು.

ನಾರಿಶಕ್ತಿ ಸನ್ಮಾನವನ್ನು ಸಂಘದ 3 ಸದಸ್ಯರಿಗೆ ಮಾಡಲಾಯಿತು.ದಿವ್ಯಜೋತಿ ಸ್ತ್ರಿ ಶಕ್ತಿಯ ಭವಾನಿ ಇವರಿಗೆ ಕೋಳಿ ಸಾಕಣಿಗೆ ಶ್ರೀ ದುರ್ಗಾ ಸಂಜೀವಿನಿ ಸದಸ್ಯೆಯಾದ ಕವಿತಾ ಇವರಿಗೆ ಆಡು ಸಾಕಣಿಕೆ ಹಾಗೂ ಸುಜ್ಞಾನ ವಿಶೇಷ ಚೇತನರ ಸ್ವ ಸಹಾಯ ಸಂಘದ ಸದಸ್ಯ ಸೌರಭ ಇವರಿಗೆ ಸನ್ಮಾನಿಸಲಾಯಿತು.

ಸುಶೀಲ ಮಾ.ತಾ.ಸ, ಗೀತಾ ಶಾರದ ಮಾ.ಗ್ರಾ.ಪಂ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರುಗಳು ಒಕ್ಕೂಟದ ಪದಾಧಿಕಾರಿಗಳು, LCRP ಗಳು, ಕೃಷಿ ಸಖಿ, ಪಶುಸಖಿ, ಮಹಿಳಾ ಸಂಘದ ಸದಸ್ಯರುಗಳು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ವಿಮಲ ಎನ್ ಇವರು ಭಾಗವಹಿಸಿದರು. ಗೀತಾ ಧನ್ಯವಾದವಿತ್ತರು .

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಲಾಯಿಲ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ನಡ ಗ್ರಾಮ ಸಹಾಯಕ ಜಯರಾಜ್ ಮೃತ್ಯು

Suddi Udaya

ಬೆಳ್ತಂಗಡಿ: ಕಾಲುಬಾಯಿ ಲಸಿಕಾ ಕಾರ್ಯಕ್ರಮ ಉದ್ಘಾಟನೆ ಹಾಗೂ ತರಬೇತಿ ಶಿಬಿರ

Suddi Udaya

ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ತೋಡುಗಳ ಹೂಳೆತ್ತುವ ಕಾರ್ಯ

Suddi Udaya

ಅರಸಿನಮಕ್ಕಿಯಲ್ಲಿ ಮಲ್ಲ ಚಾವಡಿ ಹಬ್ಬ , ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

Suddi Udaya

ನಾರಾವಿ ಉ.ಹಿ.ಪ್ರಾ. ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!