September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ: ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಾರ್ಕಳ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಜಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ ವೀರೇಂದ್ರ ಹೆಗಡೆಯವರು ಮತ್ತು ಶ್ರೀಮತಿ ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ. ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರ ರ ಆರಾಧನೆ ಬಹು ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಮಧ್ಯಾಹ್ನ ಭೋಜನದ ದಾನಿಗಳಾದ ಶ್ರೀಮತಿ ಶಶಿ ಪ್ರಭ ಅಹಿಂಸಾ ಉಜಿರೆ, ಪೂಜಾ ಕರ್ತೃ ಗಳಾದ ಶ್ರೀಮತಿ ಚಂಚಲ ಕೃಷ್ಣರಾಜ , ಧರ್ಮಸ್ಥಳ ಬೆಳಗಿನ ಉಪಹಾರದ ದಾನಿಗಳದ ಶ್ರೀಮತಿ ಶಕುಂತಲಾ, ಡಾ. ಜಯಕೀರ್ತಿ ಜೈನ್, ಸಮಿತಿಯ ಶ್ರೀಮತಿ ಶೋಭಾ ಸಂತೋಷ್ ಜೈನ್, ಶ್ರೀಮತಿ ಚಂದನ ವೃಷಭ, ಶ್ರೀಮತಿ ವಿಮಲ ವಿಜಯ್ ಕುಮಾರ್, ಶ್ರೀಮತಿ ಶಾಂತಿ ರಾಜೇಂದ್ರ ಕುಮಾರ್ ಮುಡಾರು, ಶ್ರೀಮತಿ ಪ್ರೇಮ ವಸಂತ್ ಕುಮಾರ್ ಉಜಿರೆ, ಶ್ರೀಮತಿ ರೇಷ್ಮಾ ಫಣಿರಾಜ್, ಶ್ರೀಮತಿ ಸುರಭಿ ಜಯಕುಮಾರ್ ಇವರು ಆರಾಧನಾ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿದರು.

ಪ್ರಧಾನ ಪುರೋಹಿತರಾಗಿ ಪ್ರತಿಷ್ಠಾಚಾರ್ಯ ಜಯರಾಜ್ ಇಂದ್ರ ಬೆಳ್ತಂಗಡಿ ಅರಹಂತ ಇಂದ್ರ ಶಿಶಿಲ, ಶ್ರೀ ಕೀರ್ತಿ ಇಂದ್ರ ಬೈಲ ಬೈಲ oಗಡಿ ,ಚಿತ್ತರoಜನ್ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಾಲ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು.

Related posts

ಇಂದಬೆಟ್ಟು ಗ್ರಾ.ಪಂ ವಿವಿಧ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ದೂರು: ಎರಡು ದಿನಗಳಲ್ಲಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಕಡತ ಪರಿಶೀಲನೆ-ಸ್ಥಳ ತನಿಖೆ

Suddi Udaya

ಲಾಯಿಲ : ರಸ್ತೆಗಳ ಬದಿಯಲ್ಲಿರುವ ಚರಂಡಿಗಳ ಹೂಳೆತ್ತುವಂತೆ ಮತ್ತು ಗಿಡ ಗಂಟಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರಿಂದ ಗ್ರಾ.ಪಂ.ಗೆ ಮನವಿ

Suddi Udaya

ಕೃಷಿ ಪಂಪ್‌ ಸೆಟ್ ಸ್ಥಾವರಗಳಿಗೆ ಆಧಾರ್ ಲಿಂಕ್ ಜೋಡಣೆ ಮಾಡಲು ಆ.25 ಕೊನೆಯ ದಿನ

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya

ಬಂದಾರು : ಮುರ್ತಾಜೆ ಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಸೋಲಾರ್ ಲೈಟ್ ಉದ್ಘಾಟನೆ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಯಂತ್ರೋಪಕರಣ ಖರೀದಿ ಪ್ರಶಸ್ತಿ

Suddi Udaya
error: Content is protected !!