ವೇಣೂರು: ಕಳೆದ 15 ದಿನಗಳಿಂದ ವೇಣೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಸ್ಥಿಮಿತವಿಲ್ಲದ ವಯೋವೃದ್ಧ ಅಲೆಮಾರಿಯಾಗಿ ತಿರುಗಾಡುತಿದ್ದುದನ್ನು ಕಂಡ ಸ್ಥಳೀಯರು ವೇಣೂರು ಪೋಲೀಸ್ ಠಾಣೆಗೆ ತಿಳಿಸಿ, ಪುನರ್ವಸತಿ ಕಲ್ಪಿಸಿದ ಮಾನವೀಯತೆಯ ಪ್ರಸಂಗ ಬೆಳಕಿಗೆ ಬಂದಿದೆ.
ಈ ಅಸ್ವಸ್ಥ ಉಡುಪಿಯ ಕಾಪುವಿನ ಪರಿಸರದ ರಮೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು.ಬಂಧು ಬಳಗದ ಸಂಬಂಧ ಕಳಚಿ , ಅನಾವಶ್ಯಕ ತೊಂದರೆ ಕೊಡುತ್ತಿದ್ದು ಕ್ರಮೇಣ ಮಾನಸಿಕ ಸ್ಥಿಮಿತ ಕಳೆದು ಊರೂರು ಅಲೆಯುತಿದ್ದು ಕಾಪು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸದ್ಯ ಈ ವ್ಯಕ್ತಿ ವೇಣೂರು ಸಮೀಪದ ಗುಂಡೂರಿ ಗ್ರಾಮದ ಅಂಗಡಿ ಮುಂಗಟ್ಟುಗಳ ಮಧ್ಯೆ ಅನಾಥವಾಗಿ ತಿರುಗಾಡುತ್ತಿದ್ದ ನ್ನು, ಕಂಡ ಸ್ಥಳೀಯರಾದ ಸುಕೇಶ್ ಪೂಜಾರಿ, ಪ್ರವೀಣ್ ಆಚಾರ್ಯ, ಇವರು ವೇಣೂರು ಪೋಲೀಸ್ ಠಾಣೆಗೆ ಸಂಪರ್ಕಿಸಿ ಸಹಾಯಕ್ಕಾಗಿ ವಿನಂತಿಸಿದಂತೆಯೇ, ಇದಕ್ಕೆ ಗುಂಡೂರಿಯ ಶ್ರೀಗುರು ಚೈತನ್ಯವನ್ನು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳರವರು ಪೋಲೀಸರ ಜತೆ ಸಹಕರಿಸಿ ಈ ವ್ಯಕ್ತಿಯ ಬಂಧುಗಳ ಪತ್ತೆ ಹಚ್ಚಿ ಪೋಲೀಸ್ ಠಾಣೆಗೆ ಕರೆಸಿ ಅವರ ಸಮಸ್ಯೆ ಆಲಿಸಿ ಬಂಧುಗಳ ಒಪ್ಪಿಗೆಯಂತೆಯೇ ಸೇವಾಶ್ರಮದಲ್ಲಿ ಎ.3ರಂದು ಪುನರ್ವಸತಿ ಕಲ್ಪಿಸಲಾಯಿತು .
ಪೂಲೀಸರ,ಸ್ಥಳೀಯರ, ಶ್ರೀಗುರು ಚೈತನ್ಯ ಸೇವಾಶ್ರಮದ ಈ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.