July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಬಾಜೆ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಪಿಕಪ್ ಡಿಕ್ಕಿ : ಚಿಕಿತ್ಸೆ ಫಲಕಾರಿಯಾಗದೆ ಸಾವು

ಕೊಕ್ಕಡ: ಶಿಬಾಜೆಯಲ್ಲಿ ಪಿಕಪ್ ವಾಹನದ ಚಾಲಕ ವಾಹನವನ್ನು ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ ವೇಳೆ ತನ್ನ ಮಕ್ಕಳ ಮುಂದೆಯೇ ಅಪಘಾತ ನಡೆದು ತಂದೆ ದಾರುಣಾವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಶಿಬಾಜೆ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ರುಕ್ಮ ಮೋಗೇರ(50 ವರ್ಷ) ಎಂದು ಗುರುತಿಸಲಾಗಿದೆ.

ರುಕ್ಮ ಮೋಗೇರ ಅವರು ತನ್ನ ಮಕ್ಕಳಾದ ಉಪೇಂದ್ರ ಮತ್ತು ನಾಗೇಶ್ ರೊಂದಿಗೆ ಗೊಬ್ಬರ ಲೋಡ್ ಮಾಡಲೆಂದು ಜಯೇಶ್ ಎಂಬವರ ಪಿಕಪ್ ವಾಹನದಲ್ಲಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಿಕಪ್ ನಿಲ್ಲಿಸಿ ಅದರಲ್ಲಿದ್ದ ರುಕ್ಮ ಮೋಗೇರ ಹಾಗೂ ಮಕ್ಕಳಿಬ್ಬರು ಪಿಕಪ್ ನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ‌ ಪಿಕಪ್ ಚಾಲಕ ವಾಹನವನ್ನು ಅಜಾಗರೂಕತೆಯಿಂದ ಒಮ್ಮೆಲೇ ಹಿಂದಕ್ಕೆ ಚಲಾಯಿಸಿದ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ರುಕ್ಮ ಮೋಗೇರ ಅವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದು ಅವರು ಗಂಭೀರ ಗಾಯಗೊಂಡಿದ್ದು. ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಯ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ನೋಣಮ್ಮ, ಮಕ್ಕಳಾದ ಉಪೇಂದ್ರ, ಹರೀಶ, ಹರೀಣಾಕ್ಷಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.

Related posts

ಕುತ್ಲೂರು: ಅಳಂಬ ನಿವಾಸಿ ಶಾರದಾ ಗಣಪತಿ ನಿಧನ

Suddi Udaya

ಕಳೆಂಜ: ನಡುಜಾರ್ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆಯಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Suddi Udaya

ಕೆಎಮ್ ಜೆ ಗುರುವಾಯನಕೆರೆ ಸರ್ಕಲ್ ವತಿಯಿಂದ ಮದ್ದಡ್ಕದಲ್ಲಿ ಈದ್ ಮಿಲಾದ್ ಸಂಗಮ

Suddi Udaya

20 ವರ್ಷಗಳ ಯಶಸ್ವಿ ಪಯಣ: ಜು.10- ಮಡಂತ್ಯಾರಿನಲ್ಲಿ ಲುಕ್ ಆಪ್ಟಿಕ್ಸ್ ಮರು ಉದ್ಘಾಟನೆ:

Suddi Udaya

ಹಳೇಪೇಟೆ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!