September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಗ್ರಾ.ಪಂ. ನಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆ

ಶಿಶಿಲ :ಜಿಲ್ಲಾಧಿಕಾರಿಯವರ ಆದೇಶದಂತೆ ಶಿಶಿಲ ಗ್ರಾಮಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿಯ ಸಭೆಯು ಜೂ.28 ರಂದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಸಲಾಯಿತು.

ಗ್ರಾಮದಲ್ಲಿ ಇರುವ ಸಮಸ್ಯೆಗಳ ಪಟ್ಟಿ ಮಾಡಿ ಇಲಾಖೆಗಳಿಗೆ ಮಾಹಿತಿ ನೀಡಿ ಇಲಾಖೆಗಳಿಂದ ತಕ್ಷಣ ಕ್ರಮಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದ ವಿಪತ್ತು ನಿರ್ವಹಣಾ ಸಭೆಯಲ್ಲಿ ನಿರ್ಧಾರಿಸಲಾಯಿತು. ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ತಂಡದ ಸಭೆಯಲ್ಲಿ ಸೂಚಿಸಲಾಯಿತು. ಗ್ರಾಮದಲ್ಲಿ ಇರುವ ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳನ್ನು ತೆರವುಗೊಳ್ಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಸುಧೀನ್ ಡಿ., ಪಂಚಾಯತ್ ಅಭಿವೃದ್ದಿ ಅಧಿಕಾರಿ ದಿನೇಶ್ ಎಂ, ಗ್ರಾಮ ಆಡಳಿತಾಧಿಕಾರಿ ತೇಜಸ್ವಿ, ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶಶಿಧರ್, ಸಂದೀಪ್, ಗಸ್ತು ಅರಣ್ಯ ಪಾಲಕ ನಾಗಲಿಂಗ ಬಡಿಗೇರ, ಕೊಳಕ್ಕೆಬೈಲು ಶಾಲಾ ಮುಖ್ಯೋಪಾಧ್ಯಾಯರಾದ ರೊನಾಲ್ಡ್ ಮಿನೇಜಸ್, ಹೆವಾಜೆ ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್, ಆಶ್ರಮ ಶಾಲಾ ಅಧ್ಯಾಪಕರಾದ ಕರುಣಾಕರ, ಸಮುದಾಯ ಆರೋಗ್ಯ ಅಧಿಕಾರಿ ಪವಿತ್ರ, ಅಂಗನವಾಡಿ ಕಾರ್ಯಕರ್ತೆಯರಾದ ಯಶೋದಾ, ಕುಸುಮಾವತಿ, ನಯನ ಕುಮಾರಿ, ಆಶಾ ಕಾರ್ಯಕರ್ತೆ ರೂಪ, ಸಂಜೀವಿನಿ ಒಕ್ಕೂಟದ ಎಂಬಿಕೆ ಶಾರದಾ, ಎಲ್ ಸಿ ಆರ್ ಪಿ ಶಶಿ, ಕೃಷಿ ಸಖಿ ವಸಂತಿ, ಪಶು ಸಖಿ ಆಶಿಕಾ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರಾದ ಕಿರಣ್, ಗಂಗಾಧರ, ಯುವಕ ಮಂಡಲ ಸದಸ್ಯ ಪದ್ಮನಾಭ, ರಾಧಾಕೃಷ್ಣ ಗೌಡ ಗುತ್ತು ಮುಂತಾದವರು ಭಾಗವಹಿಸಿದ್ದರು.

Related posts

ಗ್ರಾಮ ಪಂಚಾಯತ್ ನೌಕರರ ಶ್ರೇಯ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ ಆಯ್ಕೆ

Suddi Udaya

ನೆರಿಯದಲ್ಲಿ ಬಿಜೆಪಿಯ ಬೃಹತ್‌ ಸಾರ್ವಜನಿಕ ಪ್ರಚಾರ ಸಭೆ

Suddi Udaya

ಸಿಯೋನ್‌ ಆಶ್ರಮದಲ್ಲಿ ಉಚಿತ ವೈದ್ಯಕೀಯ, ಚರ್ಮ ಹಾಗೂ ದಂತ ಚಿಕಿತ್ಸಾ ಶಿಬಿರ

Suddi Udaya

ಶಿರ್ಲಾಲು ಗರಡಿ – ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

Suddi Udaya

ಎಸ್ ಡಿ ಎಮ್ ಬೆಳ್ತಂಗಡಿ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರ ಭೇಟಿ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಜೂನಿಯರ್ ಜೆಸಿ ವಿಭಾಗಕ್ಕೆ ಯುವ ಪುರಸ್ಕಾರ ಪ್ರಶಸ್ತಿ

Suddi Udaya
error: Content is protected !!