32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಡ ಕುಟುಂಬದ ಮನೆಯ ದುರಸ್ಥಿ ಕಾರ್ಯ

ಬೆಳ್ತಂಗಡಿ : ಲಾಯಿಲ ಕಾರ್ಯಕ್ಷೇತ್ರದಲ್ಲಿ ವಾಸವಾಗಿರುವ ಬಡ ಕುಟುಂಬದ ಮಹಿಳೆ ಶ್ರೀಮತಿ ವಿನೋದ ಚಂದು ರಾಣ್ಯ ರವರ ಮನೆಯು ವಿಪರೀತ ಗಾಳಿ ಮಳೆಯಿಂದ ಮನೆಯ ಮೇಲ್ಛಾವಣಿಯ ಹಂಚುಗಳು ಒಡೆದು ಹೋಗಿದ್ದು ವಿಪರೀತ ಮನೆಯು ಸೋರುತ್ತಿದ್ದು ಇವರಿಗೆ ವಾಸ್ತವ್ಯಕ್ಕೆ ಬಹಳ ಕಷ್ಟಕರವಾಗಿತ್ತು.
ಇದನ್ನು ಗಮನಿಸಿದ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಹರಿಕೃಷ್ಣ ರವರು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು ಪಂಚಾಯತ್ ವತಿಯಿಂದ ಟಾರ್ಪಲ್ ನ್ನು ಒದಗಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ ಸುಶಾಂತ್ ರವರಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಟಾರ್ಪಲ್ ನ್ನು ಹಾಕಿ ದುರಸ್ಥಿ ಮಾಡಿಕೊಡುವ ಸಹಕಾರವನ್ನು ಮನವಿ ಮಾಡಿಕೊಂಡರು.

ಈ ಬಗ್ಗೆ ಮೇಲ್ವಿಚಾರಕರು ಶೌರ್ಯ ಘಟಕದ ಸಂಯೋಜಕರಾದ ವಸಂತಿ ರವರಿಗೆ ತಿಳಿಸಿದಾಗ ತಕ್ಷಣ ಸಂಯೋಜಕರು ಸ್ವಯಂ ಸೇವಕರನ್ನು ಈ ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದರು. ಕೂಡಲೇ ಘಟಕ ಪ್ರತಿನಿಧಿ ಮಂಜುನಾಥ್, ಒಲ್ವಿನ್ ಡಿಸೋಜ, ಅರ್ವಿನ್ ಮಿರಾಂದ, ವಸಂತ್ ರವರು ಸ್ಥಳಕ್ಕೆ ಧಾವಿಸಿ ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಮನೆಯ ದುರಸ್ಥಿ ಕಾರ್ಯಾಚರಣೆ ನಡೆಸಿ ಬಡ ಮಹಿಳೆಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ವಿವಿಧ ಕಡೆ ಧಿಡೀರ್ ಭೇಟಿ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನಿಂದ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಿಗೆ ಸನ್ಮಾನ

Suddi Udaya

ಜೂ.16: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಎರಡನೇ ಅವಧಿಗೆ ಮೀಸಲಾತಿ ನಿಗದಿ

Suddi Udaya

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಕ್ಯೂಆರ್ ಕೋಡ್ ಮತ್ತು ಲೋಗೋ ಬಿಡುಗಡೆ

Suddi Udaya

ಬಂದಾರು ಓಟೆಚ್ಚಾರು ಪರಿಸರದಲ್ಲಿ ಒಂಟಿ ಸಲಗ ದಾಳಿ ಕೃಷಿ, ಸೊತ್ತುಗಳ ನಾಶ

Suddi Udaya
error: Content is protected !!