25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ರುಡ್ ಸೆಟ್ ಸಮೀಪ ರಸ್ತೆಗೆ ಬಿದ್ದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

ಉಜಿರೆ : ಇಲ್ಲಿಯ ರುಡ್ ಸೆಟ್ ಸಮೀಪದಲ್ಲಿ ರಸ್ತೆಗೆ ಮರ ಬಿದ್ದ ಘಟನೆ ಜು.28 ರಂದು ರಾತ್ರಿ ನಡೆದಿದೆ.

ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿದ್ದು ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ ನಡೆಯಿತು..

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಉಪಸ್ಥಿತರಿದ್ದು ಶೀಘ್ರವಾಗಿ ಮರ ತೆರವುಗೊಳಿಸಲು ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು.

ರಸ್ತೆಯ ಎರಡೂ ಕಡೆಗಳಲ್ಲಿ ಸುಮಾರು ಒಂದು ತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ರು, ಶೌರ್ಯ ಉಜಿರೆ ಘಟಕದ ಸದಸ್ಯರಾದ ರವೀಂದ್ರ, ಸಂದೇಶ, ಸುಧೀರ್, ರಾಘವೇಂದ್ರ, ಸಂತೋಷ್ ಉಪಸ್ಥಿತರಿದ್ದರು.

Related posts

ನಕ್ಸಲರಿಗೆ ಶರಣಾದ ಸರ್ಕಾರ ಅಭಿವೃದ್ಧಿಯ ಕನಸು ಹುಸಿಯಾಗಿಸಿದ ಬಜೆಟ್: ಶಾಸಕ ಹರೀಶ್ ಪೂಂಜ

Suddi Udaya

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಗುರುವಾಯನಕೆರೆ ವಿದ್ವತ್ ಪ.ಪೂ. ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆ

Suddi Udaya

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ ಆಡಳಿತ ಮಂಡಳಿಯವರಿಂದ ಶಾಸಕ ಹರೀಶ್ ಪೂಂಜರ ಭೇಟಿ

Suddi Udaya
error: Content is protected !!