September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 2024-25ನೇ ಸಾಲಿನ ‘ಐ.ಟಿ. ಕ್ಲಬ್’ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇಂದು (ಜು.29) ಜರಗಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಉಜಿರೆಯ ಪ್ರಕಾಶ ಎಲೆಕ್ಟ್ರಾನಿಕ್ಸ್ ಇದರ ಪಾರ್ಟ್ನರ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಮನಾ ಶೆಟ್ಟಿ, “ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ನಾವು ಅದರ ಜೊತೆ ಸಾಗಬೇಕು ಹೊರತು ಹಿಂದುಳಿಯಬಾರದು” ಎಂದರು.

“ತಂತ್ರಜ್ಞಾನ ಕ್ಷೇತ್ರ ಜನರಿಗೆ ಸದಾ ಪೂರಕವಾಗಿ ಇರಬೇಕು. ಸಮಾಜಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದರ ಕಡೆಗೆ ನಮ್ಮ ಗಮನ ಇರಲಿ” ಎಂದು ಅವರು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಆಧುನಿಕತೆಯ ಯುಗದಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ವಿದ್ಯಾರ್ಥಿ ಹಂತದಲ್ಲಿ ಉತ್ತಮ ಹಾಗೂ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಕಾಲೇಜಿನಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಅವಕಾಶದಂತೆ ಸ್ವೀಕರಿಸಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಐ.ಟಿ. ಕ್ಲಬ್ ಸಂಯೋಜಕರಿಗೆ ಬ್ಯಾಡ್ಜ್ ನೀಡಿ ಅಭಿನಂದಿಸಲಾಯಿತು. ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ವಿಭಾಗದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಮೋನಲ್ ಸ್ವಾಗತಿಸಿದರು. ಆಶಾ ಹಾಗೂ ತಂಡ ಪ್ರಾರ್ಥಿಸಿದರು. ಐ. ಟಿ. ಕ್ಲಬ್ ಕಾರ್ಯದರ್ಶಿ ಅಂಶಿತಾ ವಂದಿಸಿದರು. ತ್ರಿಶಾ ಕಾರ್ಯಕ್ರಮ ನಿರೂಪಿಸಿದರು.

Related posts

ಭಾರತೀಯ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡಕ್ಕೆ ಎಸ್‌.ಡಿ.ಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಎಚ್. ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪಕುಲಪತಿ ಭೇಟಿ

Suddi Udaya

ಎಕ್ಸೆಲ್ ಕಾಲೇಜಿನ ಜೆಇಇ ಸಾಧಕರಿಗೆ ಗೌರವಾರ್ಪಣೆ, ನಗದು ಬಹುಮಾನ ಹಸ್ತಾಂತರ

Suddi Udaya

ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ಸಮಾವೇಶ: ಬೃಹತ್ ಸಾರ್ವಜನಿಕ ಸಭೆ – ಜಾಥಾ ಮತ್ತು ಹಕ್ಕೊತ್ತಾಯ ಮಂಡನೆ

Suddi Udaya

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಡಿ.ಎ ರಹಿಮಾನ್ ಅವರಿಗೆ ಪತ್ನಿ‌ ವಿಯೋಗ

Suddi Udaya

ವೇಣೂರು ಪಿಎಸ್ಐ ಅಕ್ಷಯ್ ಡಿ ಅವರಿಗೆ ವೇಣೂರು ಸೊಸೈಟಿಯಿಂದ ಗೌರವ

Suddi Udaya
error: Content is protected !!