ಆ.17: ಅಂತಾರಾಷ್ಟ್ರೀಯ ವಿದ್ವಾಂಸ ಎ.ಪಿ ಉಸ್ತಾದ್ ರಿಂದ, ಖಾಝಿ ಸ್ವೀಕಾರ ಹಾಗೂ ಕೂರತ್ ತಂಙಳ್ ಅನುಸ್ಮರಣೆ

Suddi Udaya

ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ನೇತೃತ್ವದಲ್ಲಿ 80 ರಷ್ಟು ಮೊಹಲ್ಲಾದ ಖಾಝಿಯಾಗಿ ಅಂತರ್ ರಾಷ್ಟ್ರೀಯ ವಿದ್ವಾಂಸ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಖಾಝಿಯಾಗಿ ಮೊಹಲ್ಲಾಗಳು ಸ್ವೀಕರಿಸುವ ಸಮಾರಂಭ ಗುರುವಾಯನಕೆರೆ ಎಫ್ ಎಂ ಗಾರ್ಡನ್ ಆಡಿಟೋರಿಯಂನಲ್ಲಿ ಆ.17ರಂದು ನಡೆಯಲಿದೆ.
ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಅಧಿಕಾರ ಸ್ವೀಕರಿಸುವ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ 2009 ರಲ್ಲಿ ಪ್ರತಿಷ್ಠಿತ ಜಾರ್ಜ್ ಟೌನ್ ಯುನಿವರ್ಸಿಟಿ ಪ್ರಕಟಿಸಿದ ವಿಶ್ವದ ಅತಿ ಪ್ರಭಾವಿ ಗಳಾದ 500 ಮಂದಿಯ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ವಹಿಸಲಿದ್ದು, ಕರ್ನಾಟಕ ಸುನ್ನೀ ಜಂ ಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಖಾಝಿ  ಝೈನುಲ್ ಉಲಮಾ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಕೋಶಾಧಿಕಾರಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಉಲ್ತೂರು ಪ್ರಾಸ್ತಾವಿಕ ಭಾಷಣ ಹಾಗೂ ಮುಖ್ಯ ಭಾಷಣ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾಡಲಿದ್ದಾರೆ.

ಸಯ್ಯಿದ್ ಕಾಜೂರು ತಂಙಳ್, ಮಲ್ಜಅ' ತಂಙಳ್, ಮನ್ಶರ್ ತಂಙಳ್, ಎಸ್ ಎಂ ಕೋಯ ತಂಙಳ್ ಉಜಿರೆ, ಸಬರಬೈಲು ತಂಙಳ್, ಕಾವಳಕಟ್ಟೆ ಹಝ್ರತ್, ಕೃಷ್ಣಾಪುರ ಖಾಝಿ, ಪೊಮ್ಮಾಜೆ ತಂಙಳ್, ಕರ್ಪಾಡಿ ತಂಙಳ್, ಹೈದರ್ ಮದನಿ, ಕಾಸಿಂ ಮದನಿ, ಅಬೂಸ್ವಾಲಿಹ್ ಮುಸ್ಲಿಯಾರ್, ಅಬೂಸುಫಿಯಾನ್ ಮದನಿ, ಝೈನಿ ಕಾಮಿಲ್ ಸಖಾಫಿ, ಶಾಫೀ ಸಅದಿ, ಎಸ್ಪಿ ಹಂಝ ಸಖಾಫಿ,ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಪಿಪಿ ಅಹ್ಮದ್ ಸಖಾಫಿ, ಪಿ ಕೆ ಮುಹಮ್ಮದ್ ಮದನಿ.ಆದಂ ಅಹ್ಸನಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು ತಿಳಿಸಿದ್ದಾರೆ.

  ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ಅಶ್ರಫ್ ಸಖಾಫಿ ಮಾಡಾವು, ಅಬ್ಬಾಸ್ ಬಟ್ಲಡ್ಕ, ಕಾಸಿಂ ಪದ್ಮುಂಜ ಉಪಸ್ಥಿತರಿದ್ದರು.

Leave a Comment

error: Content is protected !!