September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಂಡೂರು : ಸಂಘದ ಹಣವನ್ನು ಕಟ್ಟಲು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ನಾಪತ್ತೆ

ಬೆಳ್ತಂಗಡಿ: ಮುಂಡೂರು ಗ್ರಾಮದ ಬಲ್ಲಿದಡ್ಡ ಮನೆ ನಿವಾಸಿ ಶ್ರೀಮತಿ ಶಿಲ್ಪಾ ರವರು ಸಂಘದ ಹಣವನ್ನು ಮುಂಡೂರಿನ ಕಛೇರಿಗೆ ಕಟ್ಟಿ ಬರುತ್ತೇನೆಂದು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಆ.14ರಂದು ನಡೆದಿದೆ.

ಪತಿ ಹರೀಶ್ ಬಂಗೇರರವರ ದೂರಿನಂತೆ ಮುಂಡೂರು ಗ್ರಾಮದ ಬಲ್ಲಿದಡ್ಡ ಮನೆ ನಿವಾಸಿ ಶ್ರೀಮತಿ ಶಿಲ್ಪಾ (27 ವರ್ಷ) ಎಂಬವರು ಮಗಳು ವಂಶಿಕಾಳನ್ನು ಶಾಲೆಗೆ ಕರೆದುಕೊಂಡು ಹೋಗಿ ನಂತರ ಧರ್ಮಸ್ಥಳ ಸ್ವಸಹಾಯ ಸಂಘದ ಹಣವನ್ನು ಮುಂಡೂರಿನ ಕಛೇರಿಗೆ ಕಟ್ಟಿ ಬರುತ್ತೇನೆಂದು ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ಹೋದವರು ಮಗಳನ್ನು ನೆರೆಯ ಮನೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗಲು ಹೇಳಿ ಹೋದವರು ವಾಪಾಸ್ಸು ಮನೆಗೂ ಬಾರದೇ ಸಂಘದ ಕಛೇರಿಗೂ ಹೋಗದೇ ಕಾಣೆಯಾಗಿರುತ್ತಾರೆ. ಇವರು 2021 ಅಕ್ಟೋಬರ್ ತಿಂಗಳಲ್ಲಿ ಕೂಡಾ ಮನೆಯಂದ ಟೈಲರಿಂಗ್ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಮಾಡಿ ಕರೆದುಕೊಂಡು ಬರಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆರಿಯದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಗ್ರಾಹಕರ ಸಮಾವೇಶ

Suddi Udaya

ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟೀಚರ್ಸ್ ಡೇ ಮತ್ತು ಓಣಂ ಹಬ್ಬದ ಆಚರಣೆ

Suddi Udaya

ಬೆಳ್ತಂಗಡಿ : ಐಜಿಎನ್ಐಟಿಇ ಮ್ಯಾನೇಜ್ಮೆಂಟ್ ಫೆಸ್ಟ್ ಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಚಾಂಪಿಯನ್

Suddi Udaya

ಗಡಿ ಪಾರು ಮಾಡಿ ಎನ್ನಲು ರಕ್ಷಿತ್ ಶಿವರಾಂ ಯಾರು..? ಕುಂಬಳಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿ ಅರಚಾಡಿದರೆ ನಾವೇನು ಮಾಡಲು ಸಾಧ್ಯ:ತಾ.ಪಂ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್

Suddi Udaya

ಕುಕ್ಕಳ, ಪಾರೆಂಕಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಪ್ರಕರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ

Suddi Udaya
error: Content is protected !!