September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶ್ರೀರಾಮ ಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ ಸಮಾರೋಪ ಸಮಾರಂಭ-ಸೀಮೋಲ್ಲಂಘನ

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜು.21 ಗುರು ಪೌರ್ಣಮಿಯಿಂದ ಆ.30ರವರೆಗೆ ಭಟ್ಕಳ ಕರಿಕಲ್ ಧ್ಯಾನಮಂದಿರದಲ್ಲಿ ಹಮ್ಮಿಕೊಂಡಿದ್ದ ಚಾತುರ್ಮಾಸ್ಯ ವೃತಾಚರಣೆಯ ಸಮಾರೋಪ ಸಮಾರಂಭ ಆ.30ರಂದು ನಡೆಯಿತು.


ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾನಂದ ಸರಸ್ವತಿ ಮಹಾರಾಜ್, ಪಂಚ ದಶನಾಮ ಜುನಾ ಅಖಾಡದ ಅಂತರಾಷ್ಟ್ರೀಯ ಉಪಾಧ್ಯಕ್ಷರು, ಟಾಟಾ ನಗರ, ಜಾರ್ಖಂಡ್ ಶ್ರೀ ವಿದ್ಯಾನಂದ ಸರಸ್ವತಿ ಮಹಾರಾಜ್, ಪಂಚದಶನಾಮ ಜುನಾ ಅಖಾಡದ ನಿಕಟಪೂರ್ವ ಮಹಾಮಂತ್ರಿ, ಹರಿದ್ವಾರದ ಶ್ರೀ ದೇವಾನಂದ ಸರಸ್ವತಿ ಮಹಾರಾಜ್, ಪಂಚದಶನಾಮ ಜುನಾ ಅಖಾಡ, ಟಾಟಾ ನಗರದ ಶ್ರೀ ಇಂದ್ರಾನಂದ ಸರಸ್ವತಿ ಮಹಾರಾಜ್, ಅಯೋದ್ಯೆಯ ಶ್ರೀ ಕೇಶವಾನಂದ ಸರಸ್ವತಿ ಸ್ವಾಮೀಜಿ, ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗರಿಕಾ ಸಚಿವ ಮಾಂಕಾಳ್ ವೈದ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವ ಗುಲ್ಬರ್ಗದ ಮಲೀಕಯ್ಯ ಗುತ್ತೇದಾ‌ರ್, ಭಟ್ಕಳದ ಮಾಜಿ ಶಾಸಕ ಸುನಿಲ್ ಬಿ.ನಾಯ್ಕ, ದೆಹಲಿಯ ಉದ್ಯಮಿ ರಾಕೇಶ್ ಸಿಂಗ್, ಭಾಗವಹಿಸಿದ್ದರು. ನಾಮಧಾರಿ ಸಂಘದ ಅಧ್ಯಕ್ಷ ಅರುಣ್ ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ.ನಾಯ್ಕ, ಕೃಷ್ಣ ನಾಯ್ಕ ಶಿರಾಲಿ, ಸುಬ್ರಾಯ ನಾಯ್ಕ, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


ಈ ದಿನದ ಕೊನೆಯ ಚಾತುರ್ಮಾಸ್ಯ ಸಂದರ್ಭದಲ್ಲಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಮಂಗಳೂರು ಶಾಸಕ ಭರತ್ ಶೆಟ್ಟಿ, ಇತರ ಗಣ್ಯರು, ಭಕ್ತರು ಆಗಮಿಸಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

Related posts

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಹುಟ್ಟೂರಲ್ಲಿ ಬಂಗೇರರ ವೃತ್ತ ಮತ್ತು ಪುತ್ಥಳಿ ನಿರ್ಮಾಣ: ಜಯವಿಕ್ರಮ್ ಕಲ್ಲಾಪು

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆ

Suddi Udaya

ಉಜಿರೆ ಎಸ್.ಡಿ.ಎಂ ಸಿ.ಬಿ.ಎಸ್.ಇ ಶಾಲೆಗೆ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಭೇಟಿ

Suddi Udaya

ಎಲ್‌ಸಿಆರ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಾಳೆ ವಿದ್ಯುತ್‌ ನಿಲುಗಡೆ

Suddi Udaya
error: Content is protected !!