23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗೇರುಕಟ್ಟೆ: ಹಿದಾಯ ತುಸ್ಸಿಬಿಯಾನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳ ಕಲಾ ಕಲರವ ಕಾರ್ಯಕ್ರಮ “ಎಂಬ್ರೆಝ್ ಮದೀನಾ”

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧೀನದಲ್ಲಿರುವ ಹಿದಾಯ ತುಸ್ಸಿಬಿಯಾನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳ ಕಲಾ ಕಲರವ ಕಾರ್ಯಕ್ರಮ ಎಂಬ್ರೆಝ್ ಮದೀನಾ – 24 ಕಾರ್ಯಕ್ರಮ ನಡೆಯಿತು.


ಅಧ್ಯಕ್ಷತೆಯನ್ನು ಅಬೂಬಕ್ಕರ್ ಹಾಜಿ ವಹಿಸಿದ್ದರು. ಖತೀಬರಾದ ಮುಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಪ್ರಾಸ್ತಾವಿಕವಾಗಿ ಮಾತನಾಡಿ ದುವಾ ನೆರವೇರಿಸಿದರು. ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಮುಈನಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಮಿ, ಮುಹಮದ್ ಝಿಯಾದ್ ಮು ಈನಿ ಕಲಾ ಕಲರವ ಕಾರ್ಯಕ್ರಮ ನಡೆಸಿಕೊಟ್ಟರು. ಕಳೆದ 2023 ನೇ ಸಾಲಿನ ಮದರಸದ ಪಬ್ಲಿಕ್ ಪರೀಕ್ಷೆಯಲ್ಲಿ A+ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.


ಖತೀಬ್ ಉಸ್ತಾದ್, ಸದರ್ ಮತ್ತು ಮುಅಲ್ಲಿಮರನ್ನು ಆಡಳಿತ ಸಮಿತಿ, ಕೆ.ಎಮ್.ಜೆ, ಎಸ್.ವೈ.ಎಸ್, ಸ್ವಲಾತ್ ಎಸ್.ಎಸ್.ಎಫ್ ಸಮಿತಿ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಅಬ್ದುಲ್ಲ ಕುಂಞ ದಾರಿಮಿ,ಪಿ.ಎಸ್. ಮಹಮ್ಮದ್ ಮದನಿ, ಅಬೂಸ್ವಾಲಿಹ್, ಮಹಮ್ಮದ್ ಹನೀಫ್,ಅಬ್ದುಲ್ ಖಾದರ್ ಹಾಜಿ, ಜಿ.ಅಬ್ದುಲ್ ಖಾದರ್, ಬಿ.ಎಂ.ಆದಂ ಹಾಜಿ,ಎಸ್.ಎ ಬಶೀರ್,ಮಹಮ್ಮದ್ ಎನ್.ಎನ್, ಹಾರಿಶ್ ಎನ್.ಎ., ಸಿದ್ದೀಕ್ ಜಿ.ಎಚ್.,ಫಯಾಝ್, ಸೈಫುಲ್ಲ.ಎಚ್.ಎಸ್,ಬಶೀರ್ ಎಸ್.ಎಮ್. ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪ್ರದಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related posts

ಫೆ.1-5: ನಿಟ್ಟಡೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ

Suddi Udaya

ಕಳೆಂಜ: ಅವಿವಾಹಿತ ಯುವಕ ನೇಣುಬಿಗಿದು ಆತ್ಮಹತ್ಯೆ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ

Suddi Udaya

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

Suddi Udaya

ಬೆಳ್ತಂಗಡಿ: ಜಿ ಕೆ ಜಾಕ್‌ಪಾಟ್ – ಸೀಸನ್ 1ರ ಪ್ರಥಮ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Suddi Udaya
error: Content is protected !!