September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆಯು ಮೊದಲ ಬಾರಿಗೆ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಹಾಗೂ ನಿಡ್ಲೆ ಅಗ್ರೀಲೀಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ “ಹೇ ಶಾರದೆ” ಫೋಟೊ ಸ್ಪರ್ಧೆ” ಆಯೋಜಿಸಿತ್ತು.

ಇದರ ಫಲಿತಾಂಶವು ಪ್ರಕಟಗೊಂಡಿದ್ದು ಪ್ರಥಮ ಬಹುಮಾನವನ್ನು ಶಾರ್ವಿ ಶೆಟ್ಟಿ ಸುಮುಖ ಸದನ ಕರ್ನೋಡಿ, ದ್ವಿತೀಯ ಬಹುಮಾನವನ್ನು ಓಶ್ಮಿ ಜಿ. ಅಕ್ಕಳ ಮನೆ ಪುತ್ತಿಲ, ತೃತೀಯ ಬಹುಮಾನವನ್ನು ದೀಕ್ಷಿತಾ ಶಿವಾಜಿನಗರ ಲಾಯಿಲ ಇವರು ಪಡೆದುಕೊಂಡಿದ್ದಾರೆ.

ಈ ಹಿಂದೆ ಎರಡು ಬಾರಿ ರಾಧೇ-ಕೃಷ್ಣ ಫೋಟೋ ಸ್ಪರ್ಧೆಯನ್ನು ಬೆಳ್ತಂಗಡಿ ತಾಲೂಕಿನವರಿಗೆ ಆಯೋಜಿಸಿದಾಗ ಹಲವಾರು ತಾಲೂಕಿನ ಹೊರಗಡೆ ಇರುವ ಪತ್ರಿಕೆ ಹಾಗೂ ಆನ್‌ಲೈನ್ ಓದುಗರಿಂದ ನಮಗೂ ಒಂದು ಅವಕಾಶ ನೀಡಿ ಎಂಬ ಬೇಡಿಕೆಯಂತೆ “ಹೇ ಶಾರದೇ” ಎಂಬ ಶಾರದಾ ಫೋಟೋ ಸ್ಪರ್ಧೆ ಆಯೋಜಿಸಿದ್ದು ಅದರಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರು, ಕಾರ್ಕಳದಿಂದ ಇನ್ನೂರಕ್ಕೂ ಮಿಕ್ಕಿ ಫೋಟೋಗಳು ಬಂದಿರುತ್ತದೆ. ಈ ಫೋಟೋ ಸ್ಪರ್ಧೆಯಲ್ಲಿ ಉಜಿರೆ ರಶ್ಮಿ ಸ್ಟುಡಿಯೋದ ರಾಮಕೃಷ್ಣ ರೈ ರವರು ತೀರ್ಪುಗಾರರಾಗಿದ್ದರು.

Related posts

ಉಜಿರೆ: ಶ್ರೀ. ಧ.ಮಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ಮುಂಡೂರು: ಮಳೆಗೆ ಮನೆ ಬಳಿ ಮಣ್ಣು ಕುಸಿತ, ಅಪಾಯದಂಚಿನಲ್ಲಿ ಮನೆ

Suddi Udaya

ದಕ್ಷಿಣ ಕನ್ನಡ: ಬೆಳ್ತಂಗಡಿ ಸೇರಿದಂತೆ 5 ತಾಲೂಕುಗಳಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ

Suddi Udaya

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

Suddi Udaya

ನಾಲ್ಕೂರು: ತುಂಡಾಗಿ ಬಿದ್ದ ವಿದ್ಯುತ್‌ ತಂತಿಯಿಂದ ತೋಟದಲ್ಲಿ ಮೆಯುತ್ತಿದ್ದ ಹಸುವಿಗೆ ವಿದ್ಯುತ್ ತಗುಲಿ ಸಾವು

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!