September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

ಬೆಳ್ತಂಗಡಿ : ಯುಗಾದಿ ನವ ಪಲ್ಲವಕೆ ನಾಂದಿ ತಂಡದಿಂದ ಅ.20 ರಂದು ಧರ್ಮಸ್ಥಳದ ಗ್ರಾ.ಪಂ ಸಮುದಾಯ ಭವನ (ನೇತ್ರಾವತಿ ಸಭಾಂಗಣ)ದಲ್ಲಿ ಸ್ನೇಹಕೂಟ ನಡೆಯಲಿರುವುದು.

ಸ್ನೇಹಕೂಟದ ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯ ಕುಮಾರ್ ಜೈನ್ ಅಳದಂಗಡಿ ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿಗಳಾದ, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲಾ ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಉಪಸ್ಥಿತಿ ಹಿರಿಯ ಸಾಹಿತಿಗಳಾದ ಪೆರ್ಮುಖ ಸುಬ್ರಹ್ಮಣ್ಯ ಭಟ್, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀಮತಿ ಕಲಾವತಿ ಪ್ರಕಾಶ್, ಶರಣ ಬಸಪ್ಪ ಕುಂಬಾರ್,ಶ್ರೀಮತಿ ಡಾ.ಶ್ವೇತಾ ಪ್ರಕಾಶ್, ಹೆಚ್.ಡಿ.ದಿವಾಕರ್, ಭಾಗವಹಿಸಲಿದ್ದಾರೆ.

ಶ್ರೀಮತಿ ಜ್ಞಾನೇಶ್ವರಿ ಉಡುಪ ಮತ್ತು ಶ್ರೀಮತಿ ಸೌಮ್ಯ ಗುರು ಕಾರ್ಲೆ ಯುಗಾದಿ ಧ್ಯೇಯ ಗೀತೆ ಗಾಯನ ಮಾಡಲಿದ್ದಾರೆ.


ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಮಾರಂಭದ ವ್ಯವಸ್ಥಾಪಕರಾದ
ಬೆಳ್ತಂಗಡಿ ತಾಲೂಕಿನ ಆಶಾ ಅಡೂರ್, ಶ್ರೀಮತಿ ಶ್ರೀಲತಾ ಭಾರ್ಗವ,ಶ್ರೀಮತಿ ವೀಣಾ ಉಮೇಶ್,ಶ್ರೀಮತಿ ಸುಜಾತ ಭಟ್, ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಲಿದ್ದಾರೆ. ಆಡಳಿತ ಮಂಡಳಿಯ ಎಂದು ಯುಗಾದಿ ನವ ಪಲ್ಲವಕೆ ನಾಂದಿ ಆಡಳಿತ ಮಂಡಳಿಯ ಶ್ರೀನಾಗ್ ಪಿ.ಎಸ್.ಹೊನ್ನಾವರ ತಿಳಿಸಿದ್ದಾರೆ.

Related posts

ನಿಡ್ಲೆ: ಹೇಮಲತಾ ಕೆ. ಎಸ್. ಸನಿಲ ನಿಧನ

Suddi Udaya

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕನ್ಯಾನ ಸದಾಶಿವ ಶೆಟ್ಟಿ ಆಯ್ಕೆ

Suddi Udaya

ಡಿ.27: ಗುರುವಾಯನಕೆರೆ 37 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾಟ

Suddi Udaya

ಮುಂಡಾಜೆ: ಕೊಂಬಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya
error: Content is protected !!