September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿ ರಿಜಿಸ್ಟ್ರಾರ್ ಭೇಟಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿಯ ರಿಜಿಸ್ಟ್ರಾರ್ ಹಾಗೂ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ| ಚಿದೇಂದ್ರ ಎಂ. ಶೆಟ್ಟರ್ ಅ. 24ರಂದು ಭೇಟಿ ನೀಡಿದರು.

ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ವಿಶಾಲವಾದ ಕಟ್ಟಡ ನೋಡಿ ಯಾವ ರೋಗಿಯೂ ಬರುವುದಿಲ್ಲ. ಆಸ್ಪತ್ರೆ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ತುರ್ತಾಗಿ ದೊರೆಯುವ ಉತ್ತಮ ಸೇವೆ ಹಾಗೂ ರೋಗಿ ಮತ್ತು ರೋಗಿಯ ಸಹಾಯಕರೊಂದಿಗೆ ನಾವು ನಡೆಸುವ ಸಂವಹಣ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಧಾರವಾಡ ಆಸ್ಪತ್ರೆ ಪ್ರಾರಂಭಗೊಂಡಾಗ ಅಲ್ಲಿ ವಿಶಾಲವಾದ ಕಟ್ಟಡ, ವಿಶಾಲವಾದ ಹೊರಾಂಗಣ ಎಲ್ಲವೂ ಖಾಲಿ ಖಾಲಿ ಇತ್ತು, ಕೆಲವೇ ವರ್ಷದಲ್ಲಿ ಆ ಆಸ್ಪತ್ರೆಯಲ್ಲಿ ಜಾಗದ ಕೊರತೆ ಆಗುವಂತೆ ರೋಗಿಗಳ ಸಂಖ್ಯೆ ಜಾಸ್ತಿಯಾಯಿತು. ವೈದ್ಯರ, ದಾದಿಯರ ಹಾಗೂ ಸಿಬ್ಬಂದಿಗಳ ದುಡಿಮೆ ಮತ್ತು ತ್ಯಾಗದಿಂದ ಮಾತ್ರ ಇದು ಸಾಧ್ಯ. ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ಕೂಡ ಇದೇ ರೀತಿ ಅಭಿವೃದ್ಧಿ ಹೊಂದುತ್ತಿದೆ. ಹೊರರೋಗಿ ವಿಭಾಗ ಹಾಗೂ ಒಳರೋಗಿ ವಿಭಾಗದಲ್ಲಿ ಸಾಕಷ್ಟು ರೋಗಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಖಾಲಿ ಜಾಗ ಕಾಣಲು ಸಾಧ್ಯವಿಲ್ಲ ಎಂದರು.


ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಬಣ್ಣ ಶೆಟ್ಟಿಗಾರ್ ಮಾತನಾಡುತ್ತಾ, ನಾವು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಛಲದೊಂದಿಗೆ ಶ್ರಮಪಟ್ಟಾಗ ಉನ್ನತ ಹುದ್ದೆಗೆ ನಮ್ಮನ್ನು ಕೊಂಡೊಯ್ಯಬಲ್ಲದು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಎಲ್ಲಾ ವೈದ್ಯಕೀಯ ಸೇವೆ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ| ಸ್ವರ್ಣಲತಾ, ಕಿವಿ,ಮೂಗು,ಗಂಟಲು ತಜ್ಞ ಡಾ| ರೋಹನ್ ದೀಕ್ಷಿತ್, ಪೇಥಲಾಜಿಸ್ಟ್ ಡಾ| ವಿನಿತಾ ಅಗಸ್ಟಿನ್ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya

ಕೊಲ್ಲಿ ಬ್ರಹ್ಮಕಲಶಕ್ಕೆ ಲಾಯಿಲ ಗ್ರಾಮಸ್ಥರಿಂದ ಹೊರ ಕಾಣಿಕೆ ಸಮರ್ಪಣೆ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಸುಲ್ಕೇರಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ವತಿಯಿಂದ ಆರೋಗ್ಯ ವಿಮೆಯ ಮಂಜೂರಾತಿ ಪತ್ರ ವಿತರಣೆ

Suddi Udaya

ಉರುವಾಲು ಕಾರಿಂಜ ಶ್ರೀ ವನಶಾಸ್ತವು ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರಿಗೆ ಮನವಿ ಸಲ್ಲಿಸಿ ಸಮಾಲೋಚನೆ

Suddi Udaya

ಪುದುವೆಟ್ಟು : ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya
error: Content is protected !!