23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿ

ಅಪಘಾತದಲ್ಲಿ ಸಾವು; ನವೋದಯ ಗುಂಪಿನ ಸದಸ್ಯೆಗೆ 1 ಲಕ್ಷ ರೂ. ವಿಮೆ ಚೆಕ್ ಹಸ್ತಾಂತರ

ಬಂಗಾಡಿ ಸಹಕಾರಿ ಸಂಘದ ನಾವೂರು ಶಾಖೆಯಲ್ಲಿ ಖಾತೆಯನ್ನು ಹೊಂದಿರುವ ಶಿವಪಾರ್ವತಿ ನವೋದಯ ಸ್ವ ಸಹಾಯ ಗುಂಪಿನ ಸದಸ್ಯೆ ಕಮಲಾ ಅವರು ವಾಹನ ಅಪಘಾತದಿಂದ ಮೃತಪಟ್ಟಿದ್ದು, ಅವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚೈತನ್ಯ ವಿಮಾ ಯೋಜನೆಯಡಿಯಲ್ಲಿ ಮಂಜೂರಾದ ಒಂದು ಲಕ್ಷ ರೂ. ಮೊತ್ತದ ಚೆಕ್ ನ್ನು ಅವರ ಕುಟುಂಬಸ್ಥರಿಗೆ ಬಂಗಾಡಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಇವರು ಹಾಸ್ತಾoತರಿಸಿದರು.

ಮೃತರ ನಾಮಿನಿ ಯಾಗಿದ್ದ ಅವರ ಪತಿ ನಾವೂರಿನ ಸಂಜೀವ ಮಲೆಕುಡಿಯ, ಹಾಗೂ ಅವರ ಪುತ್ರ ರಮೇಶ್ ಮಲೆಕುಡಿಯ ಪರಿಹಾರದ ಚೆಕ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ‌ಸಂಘದ ಸಿಇಒ ದಯಾನಂದ ಶೆಟ್ಟಿಗಾರ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ, ಸಿಬ್ಬಂದಿಗಳಾದ ರಮಾನಂದ ಮತ್ತು ಮಂಜುನಾಥ ಗೌಡ, ನವೋದಯ ಸಿಬ್ಬಂದಿಗಳಾದ ಸುಮಿತ್ರಾ ಬಂಗಾಡಿ ಮತ್ತು ಜಯರಾಮ ಬಂಗಾಡಿ ಉಪಸ್ಥಿತರಿದ್ದರು.

Related posts

ಮಚ್ಚಿನ ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವೇಣೂರು: ಕೊರಗಜ್ಜ ಕಟ್ಟೆ ವಿವಾದ ಪ್ರಕರಣ: ದ.ಕ.ಜಿಲ್ಲಾಧಿಕಾರಿ ಹಾಗೂ ಎಸ್ಪಿ ತಂಡದಿಂದ ಸ್ಥಳ ಪರಿಶೀಲನೆ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ತಂಗಡಿಯಲ್ಲಿ ಅದ್ದೂರಿ ಸ್ವಾಗತ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ಪದ್ಮುಂಜ : ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya
error: Content is protected !!