July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಪರಿಸರದಲ್ಲಿ ಮರಗಳ ಮಾರಣ ಹೋಮ-ಸಚಿವರಿಗೆ ದೂರು

ಕೊಕ್ಕಡ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ, ಹತ್ಯಡ್ಕ ಗ್ರಾಮದ ಪಲಸ್ತಡ್ಕ ಪರಿಸರದಲ್ಲಿ ಸರ್ಕಾರಿ ರಕ್ಷಿತಾರಣ್ಯದಿಂದ ವ್ಯಾಪಕವಾಗಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಕರ್ನಾಟಕ ಸರ್ಕಾರದ ಅರಣ್ಯ ಸಚಿವರ ಸಹಿತ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಪರಿಸರದಲ್ಲಿ ರಕ್ಷಿತಾರಣ್ಯದಿಂದ ಉತ್ತಮ ಜಾತಿಯ ನೂರಾರು ಮರಗಳನ್ನು ಕಡಿದು ಅಲ್ಲೇ ಸಿಗಿದು ಸೈಜುಗಳನ್ನಾಗಿ ಮಾಡಿ ಸಾಗಾಟ ಮಾಡಿರುವುದು ಕಂಡು ಬರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಕೃತ್ಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಗಾಢ ಮೌನ ತಾಳಿದ್ದಾರೆ. ಅರಣ್ಯ ಸಂಪತ್ತು ಲೂಟಿ ಮಾಡುವ ಮರಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಸಚಿವರನ್ನು ಆಗ್ರಹಿಸಿದ್ದಾರೆ.
ರಕ್ಷಿತಾರಣ್ಯಕ್ಕೆ ತಾಗಿಕೊಂಡಂತೆ ಇರುವ ಮನೆಯವರು ಇದರಲ್ಲಿ ನೇರ ಭಾಗಿಗಳಾಗಿದ್ದು, ಕೊಕ್ಕಡ-ಅರಸಿನಮಕ್ಕಿ ರಸ್ತೆ ಬದಿಯಲ್ಲಿ, ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಗಳನ್ನು ಯಂತ್ರದ ಮೂಲಕ ತುಂಡರಿಸಿ, ಸಿಗಿದು ಸೈಜುಗಳನ್ನಾಗಿ ಮಾಡಿ ಟಿಪ್ಪರ್ ಮತ್ತು ಪಿಕ್‍ಅಪ್ ಮೂಲಕ ಬಂಟ್ವಾಳ, ಮಂಗಳೂರು ಕಡೆಗೆ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತದೆ. ಅದಾಗ್ಯೂ ಸೈಜು ಮಾಡಲಾಗಿ ಉಳಿದ ಕಟ್ಟಿಗೆಗಳನ್ನು ಪಿಕ್‍ಅಪ್ ಲೋಡು ಒಂದಕ್ಕೆ 7 ಸಾವಿರ ರೂಪಾಯಿಯಂತೆ ಹೊಟೇಲ್‍ಗಳಿಗೆ ಸಾಗಾಟ ನಡೆಯುತ್ತಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಪಲಸ್ತಡ್ಕ ಪರಿಸರದಲ್ಲಿ ನೂರಾರು ಮರಗಳ ತುದಿ ಕತ್ತರಿಸಿ ಮುಂದಿನ ಕಾರ್ಯಾಚರಣೆಗೆ ಸಿದ್ಧಪಡಿಸಿ ಇಡಲಾಗಿದೆ. ಹಾಗೂ ರಕ್ಷಿತಾರಣ್ಯದೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೃತ್ಯಗಳು ನಡೆಯುತ್ತಿದ್ದರೂ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷತದಿಂದಾಗಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಕಾಡು ಪ್ರಾಣಿಗಳ ಬೇಟೆಗಾರರಿಗೆ ಮತ್ತು ಮರಗಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಹಾಡುಹಗಲಿನಲ್ಲಿ ಕಾಡು ಕೋಣ ಬೇಟಿಯಾಡಿದ ಕೃತ್ಯ ಮತ್ತು ಮಗನ ಹುಟ್ಟುಹಬ್ಬದ ಔತಣ ಕೂಟಕ್ಕೆ ಕಡವೆ ಬೇಟೆಯಾಡಿದ ಪ್ರಕರಣ ದಾಖಲಾಗಿ ತಿಂಗಳು ಆಗುತ್ತಾ ಬಂದಿದ್ದರೂ ಇನ್ನೂ ಕೂಡಾ ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಒಟ್ಟಿನಲ್ಲಿ ಅರಣ್ಯ ಸಂಪತ್ತು ಸಂಪೂರ್ಣ ಲೂಟಿಯಾಗಿ ಕಾಡು ಬೋರು ಗುಡ್ಡೆಯಾಗುವ ಮುನ್ನ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕೃತ್ಯ ಎಸಗುವವರಿಗೆ ಕಡಿವಾಣ ಹಾಕುವಂತೆ ಪರಿಸರ ಪ್ರೇಮಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ: ರಾಘವೇಂದ್ರ, ವಲಯ ಅರಣ್ಯಾಧಿಕಾರಿ ಉಪ್ಪಿನಂಗಡಿ

ರಕ್ಷಿತಾರಣ್ಯ ವ್ಯಾಪ್ತಿಯ ಒಳಗೆ ಮರ ಕಡಿದಿದ್ದಲ್ಲಿ ಅದರ ಹೊರತಾಗಿ ಪಟ್ಟಾ ಜಾಗದಲ್ಲಿ ಇದ್ದರೂ ಅನುಮತಿ ಪಡೆಯದೆ ಮರ ಕಡಿದಿದ್ದರೂ ಅಪರಾಧ ಆಗುತ್ತದೆ. ಆದ ಕಾರಣ ಮರ ಕಡಿದಿರುವ ಜಾಗದ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದರು.

Related posts

ನೈನಾಡಿನಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿಯನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಹಾಗೂ ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಕೊಯ್ಯೂರು ಕೊಯಿರೊಟ್ಟು ಗುಳಿಗ ದೈವದ ನೂತನ ಕಟ್ಟೆ, ಗಗ್ಗರ ಸೇವೆ

Suddi Udaya

ಉಪ ವಲಯ ಅರಣ್ಯಾಧಿಕಾರಿ ಉಜಿರೆಯ ಕಮಲಾ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸಾಧನ ಪ್ರಶಸ್ತಿ

Suddi Udaya
error: Content is protected !!