23.4 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನ.26- ನ.30: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಬೆಳ್ತಂಗಡಿ: ನಾಡಿನ ಪಾವನ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ್ಮದೀಪೋತ್ಸವ ಕಾರ್ಯಕ್ರಮಗಳು ನ.26ರಿಂದ ನ.30ರವರೆಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವೈಭವಪೂರ್ಣವಾಗಿ ನಡೆಯಲಿದ್ದು, ನ.29ರಂದು ಸರ್ವಧರ್ಮ ಸಮ್ಮೇಳನ ಹಾಗೂ ನ.30ರಂದು ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ಜರುಗಲಿದೆ.

ನ.26: 12ನೇ ವರ್ಷದ ಪಾದಯಾತ್ರೆ
ಪ್ರತಿ ವರ್ಷದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ೧೨ನೇ ವರ್ಷದ ಪಾದಯಾತ್ರೆಯು ನ.೨೬ರಂದು ಸಂಜೆ ನಡೆಯಲಿದೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಹೊರಡುವ ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು, ಅಭಿಮಾನಿಗಳು , ಹಿತೈಷಿಗಳೂ ಸೇರಿದಂತೆ ಸಮಸ್ತ ಮಹಾಜನರು ಯಾವುದೇ ಮತ-ಧರ್ಮ-ಪಂಥಗಳ ಮಿತಿಗೊಳಗಾಗದೆ ಒಗ್ಗಟ್ಟಿನಿಂದ ಭಕ್ತಿಭಾವಭರಿತರಾಗಿ ಭಾಗವಹಿಸಲಿದ್ದಾರೆ. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಳದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ತೆರಳಿ, ಅಲ್ಲಿ ಭಗವದ್ ದರ್ಶನ, ಪವಿತ್ರ ಪ್ರಸಾದವನ್ನು ಸ್ವೀಕಾರ, ಪೂಜ್ಯರ ಆಶೀರ್ವಾದ ಕಾರ್ಯಕ್ರಮ ನಡೆಲಿದೆ. ಪಾದಯಾತ್ರೆಯು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾದ ಯು. ಶರತ್ ಕೃಷ್ಣ ಪಡ್ಡೆಟ್ನಾಯರ ನೇತೃತ್ವದಲ್ಲಿ ಜರುಗಲಿದೆ.

ನ.26ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಮಟ್ಟದ ವಸ್ತುಪ್ರದರ್ಶನವನ್ನು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಉದ್ಘಾಟಿಸಲಿದ್ದಾರೆ. ರಾತ್ರಿ ಹೊಸಕಟ್ಟೆ ಉತ್ಸವ ನಡೆಯಲಿದೆ. ನ.27 ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಲಿದೆ. ನ.28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ ನಡೆಯಲಿದೆ. ಸಂಜೆ 5.30ರಿಂದ 7ರವರೆಗೆ ನಾಗಸ್ವರ ವಾದನ, ರಾತ್ರಿ 7ರಿಂದ 8.30ರವರೆಗೆ ಸ್ವಾತಿಕ ಸಂಗೀತ' ಜೈಜೈ ಹನುಮಾನ್ ಖ್ಯಾತಿಯ ಶಂಕರ ಶಾನಭಾಗ್ ಮತ್ತು ತಂಡ ಬೆಂಗಳೂರು ಇವರಿಂದ ನಡೆಯಲಿದೆ. ರಾತ್ರಿ ಗಂಟೆ 8.30ರಿಂದ 10ರವರೆಗೆ ನೃತ್ಯಾರ್ಚನೆ ಮತ್ತುಮಾಯಾ ವಿಲಾಸ ನೃತ್ಯರೂಪಕ’ ನ್ಯಾಟ್ಯಾರಾಧನ ಕಲಾ ಕೇಂದ್ರ ಮಂಗಳೂರು ಇವರಿಂದ ನಡೆಯಲಿದೆ. ರಾತ್ರಿ ಲಲಿತೋದ್ಯಾನ ಉತ್ಸವ ನಡೆಯಲಿದೆ.


ನ.29 ಸರ್ವಧರ್ಮ ಸಮ್ಮೇಳನ:
ನ.29ರಂದು ಸರ್ವಧರ್ಮ ಸಮ್ಮೇಳನದ ೯೨ನೇ ಅಧಿವೇಶನವನ್ನು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ರಾಜರಾಜೇಶ್ವರೀ ನಗರ ಬೆಂಗಳೂರಿನ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ. ಡಾ. ಜಿ.ಬಿ ಹರೀಶ ಸಂಶೋಧಕರು ಮತ್ತು ಸಂವಹನಕಾರರು ಬೆಂಗಳೂರು, ಡಾ. ಜೋಸೆಫ್ ಎನ್.ಎಮ್ ನಿವೃತ್ತ ಪ್ರಾಂಶುಪಾಲರು ಮಡಂತ್ಯಾರು, ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಬಿಜಾಪುರ ಇವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ಶೀಜಿತ್ ಮತ್ತು ಪಾರ್ವತಿ ತಂಡ ಚೆನ್ನೈ ಇವರಿಂದ ಭರತನಾಟ್ಯ' ಕಾರ್ಯಕ್ರಮ ನಡೆಯಲಿದೆ. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ಜರುಗಲಿದೆ.

ನ.30: ಸಾಹಿತ್ಯ ಸಮ್ಮೇಳನ: ನ.30ರಂದು ನಡೆಯುವ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಶತಾವಧಾನೀ ಡಾ.ರಾ.ಗಣೇಶ ಬಹುಶ್ರುತ ವಿದ್ವಾಂಸರು ಬೆಂಗಳೂರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟ ಲೇಖಕರು, ಸಂಶೋಧಕರು ನಿವೃತ್ತ ಪ್ರಾಂಶುಪಾಲರು ಉಡುಪಿ ವಹಿಸಲಿದ್ದಾರೆ. ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ ಬೆಂಗಳೂರು, ಪ್ರಾಧ್ಯಾಪಕರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ. ಬಿ.ವಿ ವಸಂತ ಕುಮಾರ್ ಮೈಸೂರು, ಜಿಎಸ್‌ಎಸ್ ಮಹಾವಿದ್ಯಾಪೀಠದ ನಿರ್ದೇಶಕರಾದ ಪ್ರಕಟಣ ವಿಭಾಗದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ನಟರಾಜ ಎಂಟರ್ಟೈನರ್ಸ್ ಅರ್ಪಿಸುವ ರಾಜ್ಯ ಪ್ರಶಸ್ತಿ ಪುರಸ್ಕೃತಗಾನ ಗಾರುಡಿಗ’ ರಾಜೇಶ್ ಕೃಷ್ಣನ್ ಮತ್ತು ತಂಡ ಬೆಂಗಳೂರು ಇವರಿಂದ ಸಂಗೀತ ಸಂಜೆ' ಕಾರ್ಯಕ್ರಮ ನಡೆಯಲಿದೆ. ನಂತರ ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ.

ಡಿ.1 ರಂದು ಸಂಜೆ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ಬಾಹುಬಲಿ ಸೇವಾ ಸಮಿತಿ ಧರ್ಮಸ್ಥಳದ ಶ್ರಾವಕ ಶ್ರಾವಕಿಯರಿಂದ ಜಿನಗಾನೋತ್ಸವ’ ನವೀನ್ ಜಾಂಬಳೆ ಮತ್ತು ತಂಡ ವಿಶ್ವಶಾಂತಿ ಯುವಸೇವಾ ಸಮಿತಿ ಬೆಂಗಳೂರು ಇವರಿಂದ ಜರುಗಲಿದೆ. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

Related posts

ಉರುವಾಲು ಭಾರತೀ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ: ಶಾಲಾ ವಿದ್ಯಾರ್ಥಿಗಳಿಂದ ಹೆತ್ತವರಿಗಾಗಿ ಮಾತಾ ಪಿತೃ ಪೂಜೆ

Suddi Udaya

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

ಬಿಜೆಪಿ ತೆಕ್ಕೆಗೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಬಿರುಸಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ -9, ಕಾಂಗ್ರೇಸ್ -3 ಗೆಲುವು

Suddi Udaya

ಪುಂಜಾಲಕಟ್ಟೆ ಸ.ಪ್ರ.ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಎಕ್ಸಿಟ್ ಪೋಲ್ ವರದಿ: ಮತ್ತೊಮ್ಮೆ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಎನ್‌ಡಿಎ ಮೈತ್ರಿಕೂಟಕ್ಕೆ 350ಕ್ಕಿಂತ ಹೆಚ್ಚು ಸ್ಥಾನ: ಕಾಂಗ್ರೆಸ್ ನೇತೃತ್ವ ಮೈತ್ರಿಕೂಟ 125ರಿಂದ 150ಸ್ಥಾನ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!