September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಡಿ.1 ರಂದು ರಾತ್ರಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಮವಸರಣ ಪೂಜೆ ನಡೆಯಿತು.


ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಭಗವಾನ್ ಚಂದ್ರನಾಥಸ್ವಾಮಿಯ ಅಷ್ಟವಿಧಾರ್ಚನೆ ಪೂಜೆ, ಸಿದ್ಧಪರಮೇಷ್ಠಿಗಳ ಪೂಜೆ, ಜಯಮಾಲಾ ಅರ್ಘ್ಯ, ಬಾಹುಬಲಿಸ್ವಾಮಿಯ ಪೂಜೆ, ಶ್ರುತದೇವಿ ಪೂಜೆ, ಗಣಧರಪರಮೇಷ್ಠಿ ಪೂಜೆ ಬಳಿಕ ದೀಪಾರಾಧನೆ, ಶಾಂತಿಧಾರಾ ಮತ್ತು ಪುಷ್ಪಾಂಜಲಿಯೊಂದಿಗೆ ಪೂಜಾ ಕಾರ್ಯಕ್ರಮ ಸಮಾಪನಗೊಂಡಿತು.
ಶಿಶಿರ್ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.


ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸೌಮ್ಯಶುಭಚಂದ್ರ, ಸಾವಿತ್ರಿಪುಷ್ಪದಂತ, ಮಂಜುಳಾಮಲ್ಲಿನಾಥ್ ಮತ್ತು ಭಾರತಿ ಅವರು ಸಂಸ್ಕೃತ, ಪ್ರಾಕೃತ, ಕನ್ನಡ, ಹಿಂದಿ ಮತ್ತು ತುಳು ಭಾಷೆಯಲ್ಲಿ ರಚಿತವಾದ ಜಿನಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದರು.

ಸನ್ಮಾನ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಹಾಗೂ ವಿಶೇಷ ಸಂದರ್ಭದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪಾಕಪರಿಣತರಾಗಿ ಅಡುಗೆ ವಿಭಾಗದಲ್ಲಿ ಸಹಕರಿಸಿದ ಬಂಗಾಡಿಯ ಸನತ್ಕುಮಾರ ಜೈನ್ ಮತ್ತು ರವಿರಾಜ ಜೈನ್ ಅವರನ್ನು ಗೌರವಿಸಲಾಯಿತು.


ಉದಯ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಜಿನಗಾನೋತ್ಸವ: ಬೆಂಗಳೂರಿನ ನವೀನ್‌ಜಾಂಬಳೆ ಮತ್ತು ಬಳಗದವರು ಮೂಡಬಿದ್ರೆಯ ವೀಣಾ ರಘುಚಂದ್ರ ಶೆಟ್ಟಿ ಅವರು ರಚಿಸಿದ ಜಿನಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಸಮಾರಂಭದಲ್ಲಿ ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾಹರ್ಷೇಂದ್ರಕುಮಾರ್, ಶ್ರದ್ಧಾಅಮಿತ್, ಸೋನಿಯಾಯಶೋವರ್ಮ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಹಬ್ಬ, ಉದ್ಘಾಟನಾ ಸಮಾರಂಭ

Suddi Udaya

ಗುರುವಾಯನಕೆರೆಯಲ್ಲಿ ಬೃಹತ್‌ ರಕ್ತದಾನ ಶಿಬಿರ

Suddi Udaya

ಉಜಿರೆ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ  ಕಾವ್ಯವಾಚನ-ವ್ಯಾಖ್ಯಾನ   

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಇಂಡಸ್ ಟವರ್ಸ್ ಕಾರ್ಮಿಕರ ಶಾಂತಿಯುತ ಪ್ರತಿಭಟನೆಗೆ ದ.ಕ. ಜಿಲ್ಲಾ ಬಿಎಂಎಸ್ ಘಟಕದಿಂದ ಬೆಂಬಲ

Suddi Udaya
error: Content is protected !!