April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಬಹುಮಾನ ವಿತರಣಾ ಕಾರ್ಯಕ್ರಮ – ” ಪುರಸ್ಕಾರ 2024 “

ಉಜಿರೆ : ‘ ಜೀವನದ ಪರಿಪಕ್ವತೆಗೆ ಕೇವಲ ಅಂಕಗಳು ಮಾತ್ರ ಮಾನದಂಡವಲ್ಲ. ಪಿಯುಸಿ ಶಿಕ್ಷಣವು ಭವಿಷ್ಯದ ದಾರಿಗೆ ತಳಹದಿಯಾದರೂ ಯಾರೂ ತುಳಿಯದ ದಾರಿಯನ್ನು ಇಲ್ಲಿ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ತೆಗೆಯುವ ಯಂತ್ರಗಳಾಗಬಾರದು. ಪಠ್ಯದ ಓದಿನ ಒತ್ತಡಗಳ ನಡುವೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಭವಿಷ್ಯದ ಹೆಜ್ಜೆಯನ್ನು ಅನೇಕರು ಇಡುತ್ತಿದ್ದೀರಿ . ಹೀಗೆ ಶಿಕ್ಷಣದ ಜೊತೆ ವ್ಯಕ್ತಿತ್ವವೂ ವಿಕಸನವಾಗಬೇಕು ‘ ಎಂದು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.

ಇವರು ಇಂದ್ರಪ್ರಸ್ಥ ಸಭಾಂಗಣದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ ಕಾಲೇಜಿನ ವಾರ್ಷಿಕೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮ ” ಪುರಸ್ಕಾರ 2024 ” ರಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇನ್ನೋರ್ವ ಅಭ್ಯಾಗತರಾದ ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಎ. ಕುಮಾರ ಹೆಗ್ಡೆ ಅವರು ಮಾತನಾಡಿ ‘ ವಿದ್ಯಾರ್ಥಿಗಳು ಅವಕಾಶಗಳನ್ನು ಪಡೆಯಲು ಕನಸುಗಳನ್ನು ಬೆನ್ನತ್ತಿ ಹೋಗಬೇಕು. ಯಾರನ್ನೂ ಕೂಡ ಅನುಕರಿಸಬಾರದು. ಆದರ್ಶದ ಗುರಿ ಇಟ್ಟುಕೊಂಡು ಕಾರ್ಯ ಮಾಡಬೇಕು. ವಿದ್ಯಾರ್ಥಿ ಜೀವನ ಹಾಗೂ ಮುಂದಿನ ಗುರಿ ಮುಟ್ಟಲು, ಗುರಿಗೆ ಬೇಕಾದ ಶಿಸ್ತು ಹಾಗೂ ಸಮರ್ಪಣಾ ಭಾವ ಹೊಂದಬೇಕು. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ‘ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ‘ ನಮ್ಮೊಳಗೊಂದು ಅದ್ಭುತವಾದ ಶಕ್ತಿಯಿದೆ, ಅವಕಾಶಗಳನ್ನು ಬಳಸಿ ಆ ಶಕ್ತಿಯನ್ನು ನಾವು ಹೊರಹಾಕಬೇಕು. ಸಾಹಿತ್ಯಕ , ಸಾಂಸ್ಕೃತಿಕ ಹಾಗೂ ಕ್ರೀಡಾ ಪ್ರತಿಭೆಗಳ ಅನಾವರಣವೂ ಆಗಬೇಕು ‘ ಎಂದು ಹೇಳಿದರು.

ಉಪಪ್ರಾಂಶುಪಾಲರಾದ ಡಾ. ರಾಜೇಶ್. ಬಿ. ಉಪಸ್ಥಿತರಿದ್ದು ಅಭ್ಯಾಗತರನ್ನು ಗೌರವಿಸಿದರು.

ಉಪನ್ಯಾಸಕರಾದ ದಿವ್ಯಕುಮಾರಿ ಮತ್ತು ಅಂಕಿತಾ ಎಂ.ಕೆ ಇವರು ಅಭ್ಯಾಗತರನ್ನು ಪರಿಚಯಿಸಿದರು. ಮಹಾವೀರ ಜೈನ್ ಸ್ವಾಗತಿಸಿ, ವೈದೇಹಿ ಎಸ್ ವಂದಿಸಿದರು. ವಿದ್ಯಾರ್ಥಿಗಳಾದ ಹಂಸಿನಿ ಭಿಡೆ ಹಾಗೂ ಮಧುಶ್ರೀ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕಲಾವೈಭವ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related posts

ಪಡಂಗಡಿ : ಪೊಯ್ಯೆಗುಡ್ಡೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಲಾಯಿಲ: ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ “ಗುರುವಂದನಾ” ಕಾರ್ಯಕ್ರಮ

Suddi Udaya

ಅಥ್ಲೆಟಿಕ್ಸ್ ಕ್ರೀಡಾಕೂಟ: ಮೂಡಬಿದಿರೆ ದಿಗಂಬರ ಜೈನ ಆಂ.ಮಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಪೂಜಾರಿ ಮರೋಡಿ ರವರು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಬಂಟರ ಮಹಿಳಾ ವಿಭಾಗದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!