September 6, 2026
ತಾಲೂಕು ಸುದ್ದಿ

ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಆಚರಣೆ

ಬೆಳ್ತಂಗಡಿ :ಬೆಳ್ತಂಗಡಿ ವಕೀಲರ ಸಂಘ (ರಿ ) ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ವಕೀಲರ ಭವನದಲ್ಲಿ ಡಿ. 17ರಂದು ಕ್ರಿಸ್ಮಸ್ ಆ ಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ, ಪ್ರಧಾನ ನ್ಯಾಯಾಧೀಶರಾದ ಶ್ರೀ ಸಂದೇಶ್ ಕೆ, ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಎಚ್ ಉಪಸ್ಥಿತರಿದ್ದರು,ಗೌರವ ಅಥಿತಿಗಳಾಗಿ ಮಂಗಳೂರಿನ ಹಿರಿಯ ನ್ಯಾಯವಾದಿ ಶ್ರೀ ಎಂ ಪಿ ನೋರೋನ್ಹ ಕ್ರಿಸ್ಮಸ್ ಹಬ್ಬದ ಸಂದೇಶವನ್ನು ಸಾರಿದರು, ಈ ಸಂದರ್ಭದಲ್ಲಿ ಈ ಹಬ್ಬವು ಶಾಂತಿಯ ಸಂಕೇತವಾಗಿದೆ, ಇಂತಹ ಆಚರಣೆಯನ್ನು ಹಮ್ಮಿಕೊಂಡ ಬೆಳ್ತಂಗಡಿ ವಕೀಲರ ಸಂಘವನ್ನು ಅಭಿನಂದಿಸಿ ಈ ಸಂಘವು ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷರ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲರಾದ ಫಾದರ್ ಶ್ರೀ ವಿನೋದ್ ಮಸ್ಕರೆನ್ಹಸ್ ರವರನ್ನು ಸನ್ಮಾನಿಸಲಾಯಿತು.
ಸೆಲ್ಫಿ ವಿತ್ ಸಾಂತಾ ಕ್ಲಾಸ್, ಲಕ್ಕಿ ಪರ್ಸನ್ ಆಫ್ ದಿ ಇಯರ್, ಲಕ್ಕಿ ಚೇರ್ ನ್ನು ಅಜೋಜಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ವಿಶೇಷ ಆಕರ್ಷಣೆಯಾಗಿ ಸಾಂತ ಕ್ಲಾಸ್ ( ಸುಶಾಂತ್ ) ಹಬ್ಬದ ಮೆರುಗನ್ನು ಹೆಚ್ಚಿಸಿದರು.ಸಮಿತಿಯ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಎಸ್ ಲೋಬೊ ರವರು ಸ್ವಾಗತಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿಕೆ ರವರು ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಯುವಕೀಲರ ವೇದಿಕೆ ಅಧ್ಯಕ್ಷರಾದ ಶ್ರೀ ಸಂದೀಪ್ ಡಿಸೋಜ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಹಿರಿಯ ವಕೀಲರಾದ ಶ್ರೀ ಸೇವಿಯರ್ ಪಾಲೇಲಿ ಹಾಗೂ ಶ್ರೀಮತಿ ಜೋಸ್ನಾ ವೇಲೋನ ಕೊರೆಯ ನಿರೂಪಿಸಿದರು.

Related posts

ಪಟ್ಟೂರು ಹಾಲು ಉತ್ಪದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ಯಕ್ಷಭಾರತಿ ನೇತೃತ್ವದಲ್ಲಿ ಗೋವಿಂದ ನಮನ, ನರೇಂದ್ರ ಕುಮಾರ್ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ

Suddi Udaya

ಮೇಲಂತಬೆಟ್ಟು : ಕೆಲ್ಲಕೆರೆ ಕೊರಗ ಸಮುದಾಯದ ಕಾಲೋನಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ, ಕೆ.ಟಿ.ಗಟ್ಟಿ ನಿಧನಕ್ಕೆ ಪ್ರತಾಪ್ ಸಿಂಹ ನಾಯಕ್ ಸಂತಾಪ

Suddi Udaya

ಮಿತ್ತಬಾಗಿಲು: ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಬೆಳ್ತಂಗಡಿ ಜೆಸಿಐ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!