ಮುಂಡಾಜೆ-ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಪಾದಚಾರಿ ಕಡಿರುದ್ಯಾವರದ
ಅಂತರ ಲೋಕಪ್ಪ ಗೌಡ(65) ಎಂಬವರಿಗೆ ದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಗಾಯಾಳುವಿಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.