April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಲೆಚುಕ್ಕಿ ರೋಗದಿಂದ ರೈತರು ಹೈರಾಣಾಗಿದ್ದಾರೆ-ವಿಧಾನ ಪರಿಷತ್ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಬೊಟ್ಯಾಡಿ

ಬೆಳ್ತಂಗಡಿ: ಎಲೆಚುಕ್ಕಿ ರೋಗದಲ್ಲಿ ಸುಳ್ಯ-ಪುತ್ತೂರು ಭಾಗದ ರೈತರು ಬೆಲೆ ನಾಶದಿಂದ ಹೈರಾಣಗಿದ್ದಾರೆ. ರೋಗಕ್ಕೆ ಸಮರ್ಪಕವಾಗಿ ಮದ್ದುಗಳು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪೋಷಕಾಂಶಗಳನ್ನು ನೀಡುತ್ತಿಲ್ಲ. ಔಷಧಿಗಳ ಕೊರತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.

ರಾಜ್ಯದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದ ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಎಲೆ ಚುಕ್ಕಿ ರೋಗದ ಕುರಿತು ಧ್ವನಿ ಎತ್ತಿ, ಕೇಂದ್ರದಿಂದ ಅನುದಾನ ಬಂದರು ರೈತರ ಕೈಗೆ ಸೇರಿಲ್ಲ. ರಾಜ್ಯದಿಂದಲೂ ಅನುದಾನ ಶೀಘ್ರವಾಗಿ ಒದಗಿಸಬೇಕು ಈ ಸಮಸ್ಯೆಯನ್ನು ಬಗೆಹರಿಸಬೇಕು ಆಗ್ರಹಿಸಿದರು. ಶೀಲಿಂದ್ರ ಸಮರ್ಪಕವಾಗಿ ದೊರಕುತ್ತಿಲ್ಲ. ಗುಣ ಮಟ್ಟದ ಸುಣ್ಣ ಸಿಗುತ್ತಿಲ್ಲ. ಸರಕಾರ ರೋಗಗಕ್ಕೆ ಔಷಧಿ ಕಂಡುಕೊಳ್ಳಲು ಸುಮಾರು 50 ಲಕ್ಷ ಖರ್ಚು ಮಾಡಲಾಗಿದೆ. ಆದರೆ ವರದಿ ಇನ್ನೂ ಬಂದಿಲ್ಲ. ಪರ್ಯಾಯ ಬೆಳೆಗೆ ಕಾಫಿ ಸೂಚಿಸಿದ್ದು ಇನ್ನೂ ಶಕ್ತಿ ತುಂಬು ಕಾರ್ಯವಾಗಿಲ್ಲ. ಕೇಂದ್ರದಿಂದ ಅನುದಾನ ಬಂದರು ರಾಜ್ಯ ಸರಕಾರ ಅನುದಾನ ಮಂಜೂರು ಮಾಡಲು ತಡವರಿಸುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು. ಅವರೊಂದಿಗೆ ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಧ್ವನಿಗೂಡಿಸಿದರು.

ಕೇಂದ್ರದಿಂದ ಅನುದಾನ ಬಂದಿದ್ದು ರಾಜ್ಯದ ಅನುದಾನ ಜೋಡಿಕರಣ ಪ್ರಕ್ರಿಯೆ ಮಾಡಲಾಗುತ್ತಿದ್ದು ಶೀಘ್ರವೇ ನೀಡಲು ತಯಾರಿ ಮಾಡುತ್ತಿದ್ದೇವೆ. ಒಂದು ಹೇಕ್ಟೆರ್‌ಗೆ 1,200 ರೂ. ನೀಡುತ್ತಿದ್ದು ಅದು ಕಡಿಮೆ ಆಗುತ್ತದೆ ಎಂದು ಕೇಂದ್ರಕ್ಕೆ ಹೆಚ್ಚುವರಿ ಮಾಡುವಂತೆ ಮನವಿ ಕಳುಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖಾ ಸಚಿವರು ಉತ್ತರಿಸಿದರು.

Related posts

ಅವಳಿ‌ ಕರುಗಳಿಗೆ ಜನ್ಮ ನೀಡಿದ ಗೋಮಾತೆ

Suddi Udaya

ಉಜಿರೆಯಲ್ಲಿ ಕೇರಳ ಸಂಪ್ರದಾಯ ವಿಷು ಕಣಿ ಉತ್ಸವ, ಸಾವಿರಾರು ಮಂದಿ ಭಾಗಿ

Suddi Udaya

ವಸಂತ ಬಂಗೇರರ ಉತ್ತರಕ್ರಿಯೆ ಅಂಗವಾಗಿ ಅಭಿಮಾನಿಗಳ ಸಮಾಲೋಚನಾ ಸಭೆ

Suddi Udaya

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ

Suddi Udaya

ಭಾರೀ ಮಳೆಗೆ : ಕೊಕ್ಕಡ ಎಲ್ಯಣ್ಣ ಗೌಡರವರ ಬಾವಿ ಕುಸಿತ: ಅಪಾರ ನಷ್ಟ

Suddi Udaya

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!