25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ1.20 ಲಕ್ಷ ಮೌಲ್ಯದ ಬುಲೆಟ್ ಬೈಕ್ಕಳವು

ಉಜಿರೆ: ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆಂಜ ಗ್ರಾಮದ ನಿವಾಸಿಯಾಗಿರುವ ಸಿವಿಲ್ ಎಂಜಿನಿಯರ್ ಆಗಿರುವ ನವೀನ್ ಸಿ‌.ಕೆ ಎಂಬವರು ಬೈಕ್ ಅನ್ನು ಕಳೆದುಕೊಂಡವರಾಗಿದ್ದಾರೆ ಇವರು ಮೇ 31ರಂದು ಮದ್ಯಾಹ್ನ 12.30ಕ್ಕೆ ಸುಮಾರಿಗೆ
ಉಜಿರೆಯ ಎಫ್ ಎಂ ಲಾಡ್ಜ್ ನ ಸಮೀಪ ಕೆ.ಎ 19 ಇ. ಹೆಚ್ 2516 ನಂಬರಿನ ಬುಲೆಟ್ ಬೈಕ್ ಅನ್ನು ನಿಲ್ಲಿಸಿ ಹೀಗಿದ್ದರು. ಕಚೇರಿ ಕೆಲಸ ಮುಗಿಸಿಕೊಂಡು 6 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿತ್ತು. ಬೈಕಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಕಳವಾಗಿರುವ ಬೈಕಿನ ಮೌಲ್ಯ ರೂ 1,20,000 ಎಂದು ಅಂದಾಜಿಸಲಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.

Related posts

ಉಜಿರೆ ಕಾಲೇಜು ವಿದ್ಯಾರ್ಥಿ ವರ್ಷಿತ್ ಹೆಚ್.ಎಂ. ನಾಪತ್ತೆ

Suddi Udaya

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ತಿಮರೋಡಿ ನಿರೀಕ್ಷಣಾ ಜಾಮೀನು ಆದೇಶ ಮುಂದೂಡಿಕೆ

Suddi Udaya

ಪ್ರಾಥಮಿಕ ಶಾಲೆಯ ಬಾಲಕನ ಸೈಕಲನ್ನು ಮಾರಾಟ ಮಾಡಿದ ವಿಚಾರ:ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಂದಹಲ್ಲೆ ಆರೋಪ – ಬಾಲಕ ಆಸ್ಪತ್ರೆಗೆ ದಾಖಲು-ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಹಾಡುಹಗಲೇ ರೂ.3.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ: ಬೆಳ್ತಂಗಡಿ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತನಿಖೆ

Suddi Udaya

ಬೈಕ್ ಡಿಕ್ಕಿ ಗಾಯಾಳು ಕಡಿರುದ್ಯಾವರಅಂತರ ಲೋಕಯ್ಯ ಗೌಡ ಮೃತ್ಯು

Suddi Udaya
error: Content is protected !!