September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ಮುಂಡೂರು ಸ.ಪ್ರಾ. ಶಾಲೆಯ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ

ಮುಂಡೂರು ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾಯನಕೆರೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಮುಂಡೂರು ಇವರ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಹಾಗೂ ಶಾಲಾ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮ ಉದ್ದೇಶಿಸಿ ಪ್ರಸ್ತಾವಿಕವಾಗಿ ಕೃಷಿ ಮೇಲ್ವಿಚಾರಕ ಕೃಷ್ಣ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹೆಗ್ಗಡೆ ಯವರ ಮಾರ್ಗದರ್ಶನಂತೆ ಪ್ರತಿ ವರ್ಷ ಶಾಲಾ-ಕಾಲೇಜು, ಸಮುದಾಯ ಭವನ, ದೇವಸ್ಥಾನ, ಕೆರೆಯಂಗಳದಲ್ಲಿ ಗಿಡ ನಾಟಿ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದೇವೆ. ಈ ಭೂಮಿ ಮೇಲೆ ಮನುಷ್ಯ ಬದುಕಬೇಕಾದರೆ ಪರಿಸರ ನಮಗೆ ತೀರ ಅವಶ್ಯವಾಗಿಬೇಕು. ಗಿಡವನ್ನು ನೆಟ್ಟು ಪಾಲನೆ, ಪೋಷಣೆ ಮಾಡಿ ರಕ್ಷಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಚಾಮರಾಜ ಸೀಮಿತ್ ರವರು ಮಾತನಾಡಿ ಈ ಭೂಮಿಲಿ ಇರುವಂತ ಪ್ರತಿಯೊಂದು ಪಶು, ಪಕ್ಷಿ, ಪ್ರಾಣಿಗಳು, ಮನುಷ್ಯರು ಬದುಕಬೇಕೆಂದರೆ ನಮಗೆ ಈ ಭೂಮಿಯ ಮೇಲೆ ಪರಿಸರ ಅತ್ಯಂತ ಮುಖ್ಯವಾಗಿ ಬೇಕಾಗಿರುವಂತದ್ದು, ಮನುಷ್ಯನ ಉಸಿರಾಟಕ್ಕೆ ಆಮ್ಲಜನಕ ಎಷ್ಟು ಮುಖ್ಯವೋ, ಶುದ್ಧವಾದ ಆಮ್ಲಜನಕ ಕೊಡುವಂತ ಗಿಡ ಮರಗಳು ಅಷ್ಟೇ ಮುಖ್ಯವಾದದ್ದು ಹಾಗಾಗಿ ಎಲ್ಲರೂ ಗಿಡ ನೆಟ್ಟು, ಗಿಡಗಳ ರಕ್ಷಣೆ ಮಾಡಬೇಕೆಂದು ತಿಳಿಸಿದರು.

ಗಿಡ ನಾಟಿ ಕಾರ್ಯಕ್ರಮಕ್ಕೆ ಮೇಲ್ವಿಚಾರಕಿ ಯಶೋಧ ರವರು ಚಾಲನೆ ನೀಡಿದರು. ಶೌರ್ಯ ವಿಪತ್ತುಗುರುವಾಯನಕೆರೆ ತಂಡ ದವರಿಂದ ಗಿಡ ನಾಟಿ ಮಾಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಕಲ್ಲೇಶ್ ಅವರು ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ತಂಡದ ನಾಗೇಶ್, ಜಗನಾಥ್ , ಸೇವಾಪ್ರತಿನಿಧಿ ಶ್ರೀಮತಿ ಭಾರತಿ ಹಾಗೂ ಶ್ರೀಮತಿ ಪ್ರತಿಭಾ, ಚಂದ್ರವತಿ, ಹಾಗೂ ಅಶೋಕ್ ಜೈನ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ಸಂಘದ ಸದಸ್ಯರು, ಶಾಲೆಯ ಮಕ್ಕಳು, ಊರಿನ ಗ್ರಾಮಸ್ಥರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಮಂಗಳೂರು ವಿ.ವಿ. ವಾಲಿಬಾಲ್ ಪಂದ್ಯಾಟ: ಉಜಿರೆ ಎಸ್ .ಡಿ.ಎಂ.ಕಾಲೇಜಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿಶ್ರವಣಬೆಳಗೊಳದ ಪೂಜ್ಯ ಚಾರುಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಚಂದನ ಷಷ್ಠಿ ನೋಂಪಿ ಉದ್ಯಾಪನೆ

Suddi Udaya

ರಾಜ್ಯ ಮಟ್ಟದ ಸ್ಕೌಟ್ಸ್‌ & ಗೈಡ್ಸ್‌ ಜಾಂಬೋರೇಟ್‌ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಕ್ಕಿ ಕೊಡುಗೆ

Suddi Udaya

ಹದಗೆಟ್ಟಿರುವ ಮಲ್ಲೊಟ್ಟು – ಹರ್ಪಳ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ

Suddi Udaya

ಯಂಗ್ ಚಾಲೆಂಜರ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ- ಶೈಕ್ಷಣಿಕ ನಿಧಿ ಹಸ್ತಾಂತರ

Suddi Udaya
error: Content is protected !!