September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ

ವೇಣೂರು : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2025ರ ಸಾಲಿನಲ್ಲಿ ತರಬೇತಿ ಪಡೆದು ತೇರ್ಗಡೆಯಾಗುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳಿಂದ ಆಯ್ಕೆ ಸಂದರ್ಶನಗಳನ್ನು ನಡೆಸಲಾಯಿತು.

ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ ಟೊಯೋಟೊ ಕಿರ್ಲೋಸ್ಕರ್ ಮೋಟರ್ಸ್, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್, ಎಲ್ ಅಂಡ್ ಟಿ, ಇಶಾರ್ ಮೋಟಾರ್ಸ್, ಕಿರ್ಲೋಸ್ಕರ್ ಟೋಯೋಡಾ ಟೆಕ್ಸ್ಟೈಲ್ಸ್ ಮೆಷಿನರಿಸ್, ಬಾಷ್, ಸಸ್ಮೋಸ್, ಅದ್ವೆöತ್ ಹುಂಡೈ, ಟ್ರೆöಡೆಂಟ್ ಗ್ರೂಫ್ಸ್, ಟಾಟಾ ಅರವಿಂದ್ ಮೋಟಾರ್ಸ್, ಭಾರತ್ ಅಟೋ ಕಾರ್ಸ್, ಭವಾನಿ ಇಂಡಸ್ಟ್ರಿಸ್ ಮುಂತಾದ ಖ್ಯಾತನಾಮ ಕೈಗಾರಿಕಾ ಸಂಸ್ಥೆಗಳಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಆಸುಪಾಸಿನ ಹಲವಾರು ಐಟಿಐ ಸಂಸ್ಥೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿರೂ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಂಡಿದ್ದು ಐಟಿಐ ತರಬೇತಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೇಮಕಾತಿಯ ಅವಕಾಶವನ್ನು ಪಡೆದಿದ್ದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲದಂತಾಗಿದ್ದು ಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ಪ್ರಾಪ್ತಿಯಾಗಿದೆ.

ವೇಣೂರು ಐಟಿಐಯ ಎಲ್ಲಾ ತರಬೇತಿದಾರರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಐಟಿಐಗಳ 600ಕ್ಕೂ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಪಡೆಯುವಂತಾಗಿದೆ ಎಂದು ವೇಣೂರು ಐಟಿಐನ ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Related posts

ಆರ್ಥಿಕ ಹೊರೆಯಿಂದಾಗಿ ಅಭಿವೃದ್ಧಿಗೆ ಗ್ಯಾರಂಟಿಗಳು ಹೊಡೆತ: ರಾಜ್ಯವು ಆರ್ಥಿಕ ದಿವಾಳಿಯತ್ತ: ಪ್ರತಾಪಸಿಂಹ ನಾಯಕ್

Suddi Udaya

ಕೆಎಂಜೆ ಉಜಿರೆ ಸರ್ಕಲ್ ಸಮಿತಿ ರಚನೆ

Suddi Udaya

ದಿ. ಪ್ರವೀಣ್ ನೆಟ್ಟಾರುರವರ ಮನೆಗೆ ಬೆಳ್ತಂಗಡಿ ಯುವಮೋರ್ಚಾ ಮಂಡಲದ ಪದಾಧಿಕಾರಿಗಳ ಭೇಟಿ

Suddi Udaya

ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ: ಪ್ರಸನ್ನ ಪಿ ಯು ಕಾಲೇಜಿನ ವಿದ್ಯಾರ್ಥಿ ಚಂದನ್ ಬಿ.ಯು. ಬೆಳ್ಳಿ ಪದಕ

Suddi Udaya

ಉಜಿರೆ: ಶ್ರೀ ರಾಧಾ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬಂಟ್ವಾಳದಿಂದ ವಿಶ್ವಗುರು ಭಾರತಕ್ಕಾಗಿ ಗೋ ರಥಯಾತ್ರೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ದುರ್ಗಾದೇವಿ ದೇವಸ್ಥಾನದ ನಾಗನ ಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!