September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ‘ನಾಂದಿ’ 2025 ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯಾ ಸಾಗರ ಕ್ಯಾಂಪಸ್ ಗುರುವಾಯನಕೆರೆಯಲ್ಲಿ ಹೆತ್ತವರ ಒರಿಯಂಟೇಶನ್ ನಾಂದಿ – 2025 ‘ನಡೆಯಿತು.

ಆಪ್ತ ಸಲಹೆಗಾರ್ತಿ ಡಾ.ಸ್ವಾತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಗುವಿನ ವಯಸ್ಸಿಗೆ ಅನುಗುಣವಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಬೆಳೆಯಲು ಬೇಕಾದ ಪರಿಸರವನ್ನು ನಿರ್ಮಿಸುವ ಜವಾಬ್ದಾರಿ ಪೋಷಕರದ್ದಾಗಿದೆ. ಮಗು ವಯಸ್ಸಿಗೆ ತಕ್ಕಂತೆ ಪ್ರೌಢಿಮೆ ರೂಢಿಸಿಕೊಳ್ಳುವ ಹಾಗೂ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಯಬೇಕಾದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದ್ದು.ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಜೊತೆ ತಾಳ್ಮೆ ಕಳೆದುಕೊಳ್ಳದೆ ವರ್ತಿಸಬೇಕಾದರೆ ಹೇಗಿರಬೇಕು. ಮಕ್ಕಳಿಗೆ ಅವರೊಂದಿಗೆ ಪೋಷಕರು ಕಳೆಯುವ ಸಮಯವೇ ಅತಿ ದೊಡ್ಡ ಉಡುಗೊರೆ ಎಂದು ಹೇಳಿದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಎಂ ಮಾತನಾಡಿ ಸಾಧಕನಾಗಬೇಕಿದ್ದರೆ ಪರಿಶ್ರಮ ಪಡಬೇಕು. ನಿರಂತರವಾದ ಪರಿಶ್ರಮಕ್ಕೆ ನಿಜವಾದ ಗೌರವ ಸಲ್ಲುತ್ತದೆ. ಅಂತ ಸಾಧಕರಾಗಲು ನಮ್ಮ ಮಕ್ಕಳನ್ನು ಪ್ರೇರೇಪಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ ಎಳೆಯ ಮಕ್ಕಳ ಕಲರವ ನಮ್ಮ ಕ್ಯಾಂಪಸ್ ಗೆ ಹೊಸತನವನ್ನು ತಂದಿದೆ. ಮಕ್ಕಳು ದೇವರ ಪ್ರತಿರೂಪ. ಹಾಗಾಗಿ ಇಡೀ ನಮ್ಮ ಕ್ಯಾಂಪಸ್ ದೈವಿಕ ಕಳೆಯಿಂದ ಕಂಗೊಳಿಸುತ್ತಿದೆ ಎಂದರು.

ಅಬಾಕಸ್ ತರಬೇತುದಾರ ಗುರುರಾಜ್ ಮಾತನಾಡಿದರು.ಎಕ್ಸೆಲ್ ಟೆಕ್ನೋ ಸ್ಕೂಲ್ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಪವಿತ್ರ ಹೆತ್ತವರಿಗೆ ಸಲಹೆ – ಸೂಚನೆಗಳನ್ನು ನೀಡಿದರು. ಗೀತಾ ಸಹಕರಿಸಿದರು. ಸ್ವಾತಿ ನಿರೂಪಿಸಿದರು. ಚೇತನಾ ವಂದಿಸಿದರು.

Related posts

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಉಜಿರೆ: ಶ್ರೀ ಧ.ಮಂ. ಸ್ನಾತಕೋತ್ತರ ಕಾಲೇಜಿನಲ್ಲಿ ಮಹಿಳಾ ಉದ್ಯಮಿಗಳ ಅವಕಾಶಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಕ್ಯಾಂಡಿಡ್ ಟಾಕ್ ಕಾರ್ಯಕ್ರಮ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಅಮಿತ್ ಪ್ರಥಮ ಸ್ಥಾನ

Suddi Udaya

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ತಾಲೂಕಿನಲ್ಲಿ ಶೇ. 81.31 ಮತದಾನ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ವತಿಯಿಂದ ಕೊಯ್ಯೂರು ಸ.ಹಿ.ಪ್ರಾ. ಶಾಲೆಗೆ ಗಡಿಯಾರ ಕೊಡುಗೆ

Suddi Udaya
error: Content is protected !!