September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಂಸಿಎಫ್ ನ ಸಿ ಎಸ್ ಆರ್ ಆಕ್ಟಿವಿಟಿ ಯೋಜನೆ ಅಡಿಯಲ್ಲಿ ಪೆರಿಂಜೆ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಉದ್ಘಾಟನೆ

ಪೆರಿಂಜೆ : ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಝರ್ಸ್ ಲಿಮಿಟೆಡ್ ಪಣಂಬೂರ್ ಮಂಗಳೂರು ಇದರ ಸಿ ಎಸ್ ಆರ್ ಆಕ್ಟಿವಿಟಿ 2024- 25 ರ ಸ್ವಚ್ಛ ವಿದ್ಯಾಲಯ ಯೋಜನೆ ಅಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಲೋಕಾರ್ಪಣಾ ಕಾರ್ಯಕ್ರಮ ನೆರವೇರಿತು.


ಎಂಸಿಎಫ್ ನ ಮುಖ್ಯ ಉತ್ಪಾದನಾಧಿಕಾರಿ ಎಸ್. ಗಿರೀಶ್ ಅವರು ನೂತನ ಶೌಚಾಲಯವನ್ನು ಲೋಕಾರ್ಪಣೆಗೊಳಿಸಿದರು. ನಂತರ ನಡೆದ ಸಮಾರಂಭವನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಗ್ರಾಮೀಣ ಶಾಲೆಯ ಬಲ ವರ್ಧನೆಗೆ ಶ್ರಮಿಸುತ್ತಿರುವ ಎಂ.ಸಿ.ಎಫ್ ನ ಕಾರ್ಯಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಜಗದೀಶ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶ್ರೀಮತಿ ಶಾಂತ ಕೃಷ್ಣಪ್ಪ ಸದಸ್ಯರುಗಳಾದ ಕರುಣಾಕರ, ಪ್ರಕಾಶ್ ದೇವಾಡಿಗ, ನಾಗರತ್ನ, ಶಾಂತ, ಕಮಲ, ಎಂಸಿಎಫ್ ನ ಅಧಿಕಾರಿಗಳಾದ ಚೇತನ್ ಮೆಂಡೋನ್ಸ, ಡಾ. ಯೋಗೀಶ್, ದೀಕ್ಷಿತ್ ಶೆಟ್ಟಿ, ವಿವೇಕ್ ಕೋಟ್ಯಾನ್, ವಲಯ ಜನಜಾಗ್ರತಿ ವೇದಿಕೆಯ ತಾಲೂಕು ಸದಸ್ಯರಾದ ವಿಠ್ಠಲ್ ಸಿ ಪೂಜಾರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರತಿ ಜೈನ್, ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ಶೇಖರ್ ಕುಲಾಲ್, ಎಸ್‌.ಡಿ.ಎಂ.ಸಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಶಿಕ್ಷಕರಾದ ವಿಶ್ವನಾಥ ಗೌಡ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ನೀನಾ ಕುವೆಲ್ಲೋ ಧನ್ಯವಾದಗೈದರು. ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಂ.ಸಿ.ಎಫ್ ನಿಂದ ಶಾಲೆಗೆ ನೂತನ ಶೌಚಾಲಯ ಬರುವಲ್ಲಿ ಶ್ರಮಿಸಿದ ದಿ. ಹರಿಪ್ರಸಾದ್ ಇವರ ಕಾರ್ಯವನ್ನು ಸ್ಮರಿಸಲಾಯಿತು.

Related posts

ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ತೆಕ್ಕಾರಿನ ಗುರುಕಿರಣ್ ಆಯ್ಕೆ

Suddi Udaya

ನಾರಾವಿ ಶ್ರೀ ಕ್ಷೇ.ಧ. ಜನಮಂಗಳ ಕಾರ್ಯಕ್ರಮದಡಿಯಲ್ಲಿ ಯು ಶೇಪ್ ವಾಕರ್ ವಿತರಣೆ

Suddi Udaya

ಪುಂಜಾಲಕಟ್ಟೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 17.40 ಅಡಿ ಎತ್ತರದ ಶ್ರೀರಾಮ ಮಂದಿರದ ವರ್ಣ ರಂಜಿತ ಕಟ್ಟೌಟ್ ನಿರ್ಮಾಣ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಶ್ರೀ ಗುರು ಸಾಲಗಾರರ ಮರಣ ನಿಧಿ ವಿತರಣೆ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ಕಾರ್ಯಕ್ರಮ:

Suddi Udaya

ಪುತ್ತೂರಿನ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಾಪತ್ರ ರವರು ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಹಾಗೂ ಗುರುವಾಯನಕರೆ ನವಶಕ್ತಿ ಮನೆಗೆ ಭೇಟಿ

Suddi Udaya
error: Content is protected !!